ಹರಿಹರ ಪಲ್ಲತ್ತಡ್ಕ: ಹರಿಹರೇಶ್ವರ ದೇವಸ್ಥಾನದ ಎದುರಿನ ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಬವ ತೀರ್ಥಸ್ನಾನ

0

ಭಕ್ತರಿಂದ ಪವಿತ್ರ ತೀರ್ಥಸ್ನಾನ

ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಎದುರಿನ ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಬವು ಅ.17ರಂದು ಮದ್ಯರಾತ್ರಿ 1.27 ನಡೆಯಿತು.

ಶ್ರೀ ಹರಿಹರೇಶ್ವರ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಸಿದ್ದ ಪರ್ವತದಿಂದ ಕೋಟಿ ತೀರ್ಥ ನದಿ ಹರಿಯುತ್ತಿದ್ದು ಈ ನದಿ ದೇವಸ್ಥಾನದ ಎದುರಿನಲ್ಲಿ ಸಂಗಮಗೊಂಡು ಅಘನಾಶಿನಿಯಾಗಿ ಮುಂದಕ್ಕೆ ಹರಿಯುತದೆ.ಅಘನಾಶಿನಿ ಎಂಬಲ್ಲಿ ತೀರ್ಥೊದ್ಬವವಾಗುತದೆ. ತುಲಾ ಸಂಕ್ರಮಣದಂದು ರಾತ್ರಿ1.27ರ ಶುಭ ಮುಹೂರ್ತದಲ್ಲಿ ತೀರ್ಥೋದ್ಬವ ಆಗಿದ್ದು, ಮರು ದಿನ ಬೆಳಗ್ಗೆ ದೇವಸ್ಥಾನದ ಪ್ರದಾನ ಅರ್ಚಕರು ನದಿಗೆ ಪೂಜೆ‌ ಸಲ್ಲಿಸಿ ನಂತರ ನದಿಗೆ ಭಾಗಿನ ಅರ್ಪಿಸಿ ಭಕ್ತಾದಿಗಳು ತೀರ್ಥಸ್ನಾನ ನೆರವೇರಿಸಿದರು.

ದೇವಲದ ಪ್ರದಾನ ಅರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್ ಪೂಜಾ ವಿದಿವಿದಾನ ನೆರವೇರಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರು ಹಾಗು ಸದಸ್ಯರುಗಳು ಹಾಗು ಭಕ್ತಾದಿಗಳು ಹಾಜರಿದ್ದರು.

✍️ಕುಶಾಲಪ್ಪ ಕಾಂತುಕುಮೇರಿ