ಅ. 24ರ ತನಕ ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಬಳ್ಪ ಗ್ರಾಮದ ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅ. 15ರಿಂದ ಅ. 24ರ ವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ. 15ರಂದು ಬೆಳಿಗ್ಗೆ ಗಣಪತಿ ಹವನ, ಅ. 18ರಂದು ಗಣಪತಿ ದೇವರಿಗೆ ಅಪ್ಪಕಜ್ಜಾಯ ಸೇವೆ, ಮಹಾವಿಷ್ಣು ದೇವರಿಗೆ ಹಾಲು ಪಾಯಸ ಸೇವೆ ನಡೆಯಿತು.

ಅ. 19ರಂದು ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ ನಡೆಯಲಿದೆ. ಅ. 20ರಂದು ಬೆಳಿಗ್ಗೆ ತೆನೆ ತುಂಬಿಸುವುದು ಬಳಿಕ ಶಾರದಾ ಪೂಜೆ ಆರಂಭಗೊಳ್ಳಲಿದೆ. ಅ. 21ರಂದು ಆಂಜನೇಯ ಸ್ವಾಮಿಗೆ ಅಲಂಕಾರ ಪೂಜೆ, ಅ. 23ರಂದು ಮಧ್ಯಾಹ್ನ ಮಹಾಪೂಜೆ, ಆಯುಧ ಪೂಜೆ, ರಾತ್ರಿ ರಂಗಪೂಜೆ ನಡೆಯಲಿದೆ. ನವರಾತ್ರಿಯ ಪ್ರತೀ ದಿನ ಮಧ್ಯಾಹ್ನ ಮಹಾಪೂಜೆ ಬಳಿಕ ಮತ್ತು ರಾತ್ರಿ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಭಕ್ತಾದಿಗಳು ನವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೇನ್ಯಗುತ್ತು ಗಿರಿನಾಥ ಶೆಟ್ಟಿ ಮತ್ತು ಅರ್ಚಕರಾದ ಹರಿನಾರಾಯಣ ಮನೋಳಿತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.