ಹರಿಹರ ಪಲ್ಲತ್ತಡ್ಕ: ಆಧಾರ್ ಕಾರ್ಡ್ ನೋಂದಣಿ ಮತ್ತು ಡ್ರೈವಿಂಗ್ ಲೈಸೆನ್ಸ್ ಅದಾಲತ್

0

ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹರಿಹರ ಪಲ್ಲತ್ತಡ್ಕ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ,ಸಚಿನ್ ಕ್ರೀಡಾ ಸಂಘ ಹರಿಹರ ಪಲ್ಲತ್ತಡ್ಕ, ಶಿವಹರಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಹರಿಹರ ಪಲ್ಲತ್ತಡ್ಕ ಇವರ ಸಹಭಾಗಿತ್ವದಲ್ಲಿ ಆಧಾರ್ ಕಾರ್ಡ್ ನೋಂದಣಿ ಮತ್ತು ಡ್ರೈವಿಂಗ್ ಲೈಸೆನ್ಸ್ ಅದಾಲತ್ ಕಾರ್ಯಕ್ರಮ ಅ. 19ರಂದು ಸಂಘದ ಅಧ್ಯಕ್ಷ ಹರ್ಷಕುಮಾರ್ ಡಿ.ಎಸ್ ಇವರ ಅದ್ಯಕ್ಷತೆಯಲ್ಲಿ ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹರಿಹರ ಪಲ್ಲತ್ತಡ್ಕದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್‌ನ ಅಧ್ಯಕ್ಷ ವಿಜಯ ಕುಮಾರ್ ಅಂಗಣ ದೀಪ ಬೆಳಗಿಸಿ ಉದ್ಘಾಟಿಸಿದರು.


ವೇದಿಕೆಯಲ್ಲಿ ಸಚಿನ್ ಕ್ರೀಡಾ ಸಂಘದ ಅದ್ಯಕ್ಷರಾದ ಪ್ರದೀಪ್ ಕಜ್ಜೋಡಿ,ಶಿವಹರಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅದ್ಯಕ್ಷರಾದ ದಯಾನಂದ ಪರಮಲೆ, ಅಂಚೆ ಇಲಾಖೆಯ ಸಿಬ್ಬಂದಿ ರಾಮ ಟಿ., ಮುಖ್ಯ ಕಾರ್ಯನಿರ್ವಾಹಣಾದಿಕಾರಿ ಅನಂತರಾಮ ಮಣಿಯಾನ ಉಪಸ್ಥಿತರಿದ್ದರು.