ನಾಳೆಯಿಂದ ಸುಳ್ಯ ದಸರಾ 2023 ಆರಂಭ

0

ಶೃಂಗಾರಗೊಂಡಿರುವ ಶಾರದಾಂಬ ಕಲಾವೇದಿಕೆ

ಬೆಳಿಗ್ಗೆ ಜ್ಯೋತಿ ವೃತ್ತದಲ್ಲಿ ಶಾರದಾದೇವಿ ಮೂರ್ತಿಯ ಪ್ರತಿಷ್ಠಾ ಮೆರವಣಿಗೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ , ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ (ರಿ.) ದಸರಾ ಉತ್ಸವ ಸಮಿತಿಯ ವತಿಯಿಂದ 52ನೇ ವರ್ಷದ ಶ್ರೀ ಶಾರದಾಂಬ ಉತ್ಸವವು ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದ ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ಒಂಭತ್ತು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದ್ದು, ಎಲ್ಲಾ ಸಿದ್ಧತಾ ಕೆಲಸ ಕಾರ್ಯಗಳು ಮುಕ್ತಾಯಗೊಂಡಿದೆ.

ಬೆಳಿಗ್ಗೆ ನಗರದ ಜ್ಯೋತಿ ವೃತ್ತದಿಂದ ಶ್ರೀ ಶಾರದಾದೇವಿ ಮೂರ್ತಿಯ ಪ್ರತಿಷ್ಠಾ ಮೆರವಣಿಗೆಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಚಾಲನೆ ನೀಡಲಿದ್ದಾರೆ.

ನಾಳೆಯಿಂದ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ದಸರಾ ಮಹೋತ್ಸವವು ಜರುಗಲಿದ್ದು, ಶ್ರೀ ಶಾರದಾಂಬ ಕಲಾವೇದಿಕೆಯು ಶೃಂಗಾರಗೊಂಡಿದೆ. ಅ.28ರಂದು ಅಪರಾಹ್ನ ಸುಳ್ಯ ನಗರದ ಪ್ರಮುಖ ಬೀದಿಗಳಲ್ಲಿ ದಸರಾ ಉತ್ಸವದ ಶೋಭಾಯಾತ್ರೆಯು ನಡೆಯಲಿದೆ.