ಕನಕಮಜಲು ಗ್ರಾ.ಪಂ. ಗೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭೇಟಿ

0

ಗ್ರಾ.ಪಂ. ಮಟ್ಟದ ಪ್ರಗತಿ ಪರಿಶೀಲನಾ ಸಭೆ

ಕನಕಮಜಲು ಗ್ರಾಮ ಪಂಚಾಯತಿಗೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ‌ನ.7ರಂದು ಭೇಟಿ ನೀಡಿ ಗ್ರಾಮ ಪಂಚಾಯತಿ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ ಅವರು ಅಧ್ಯಕ್ಷತೆ ವಹಿಸಿದ್ದರು.

ಕೋಟ ಶ್ರೀನಿವಾಸ ಪೂಜಾರಿ ಅವರು ಕನಕಮಜಲು ಗ್ರಾಮ ಪಂಚಾಯತಿಯ ಜಲ ಜೀವನ್ ಮಿಷನ್ ಯೋಜನೆಯ ಸ್ಥಾವರಗಳಿಗೆ ವಿಧ್ಯುತ್ ಸಂಪರ್ಕ ನೀಡುವ ಬಗ್ಗೆ, ಗುಡ್ಡಡ್ಕ ಕುಡಿಯುವ ನೀರಿನ ಘಟಕವನ್ನು ಸ್ಥಳಾಂತರಿಸುವ ಕುರಿತು, ಗ್ರಾ. ಪಂ. ಸಿಬ್ಬಂದಿಗಳ ವೇತನ ಕಡಿತ ಮಾಡಿರುವ ಬಗ್ಗೆ, ಸಾಮಾಜಿಕ ಅರಣ್ಯವನ್ನು ಗ್ರಾಮ ಪಂಚಾಯಿತ್ ಉಪಯೋಗಕ್ಕೆ ಕಾಯ್ದಿರಿಸುವ ಬಗ್ಗೆ ನಾನಾಜಿ ದೇಶ್‌ಮುಖ್ ರಾಷ್ಟ್ರೀಯ ಪ್ರಶಸ್ಥಿ ಮೋತ್ತವನ್ನು ಉಪಯೋಗಿಸುವ ಬಗ್ಗೆ , ಸಿ.ಎಸ್.ಆರ್. ಅನುದಾನ ಪಡೆಯುವ ಬಗ್ಗೆ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣಗಳ ಪತ್ತೆ ಆಗದ ಬಗ್ಗೆ ನಿವೇಶನ ಹಾಗೂ ಘನತ್ಯಾಜ್ಯ ಘಟಕಕ್ಕೆ ಜಮೀನು ಕಾಯ್ದಿರಿಸುವ ಬಗ್ಗೆ ತಹಶಿಲ್ದಾರು ಹಾಗು ಎ.ಸಿ ಗೆ ಮನವಿ ನೀಡುವಂತೆ ಹೇಳಿದರು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಪ್ರಭಾರ ಗ್ರಾಮಲೆಕ್ಕಾಧಿಕಾರಿ ಶಾಹಿನಾ, ಗ್ರಾಮ ಸಹಾಯಕ ನಂದಕುಮಾರ್, ಗ್ರಾ.ಪಂ. ಕಾರ್ಯದರ್ಶಿ ರಮೇಶ್, ಕನಕಮಜಲು ಗ್ರಾ.ಪಂ. ಉಪಾಧ್ಯಕ್ಷ ರವಿಚಂದ್ರ ಕಾಪಿಲ, ಸದಸ್ಯರಾದ ಶ್ರೀಧರ ಕುತ್ಯಾಳ, ಶ್ರೀಮತಿ ದೇವಕಿ ಕುದ್ಕುಳಿ, ಇಬ್ರಾಹಿಂ ಕಾಸಿಂ ಕನಕಮಜಲು, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳಾದ ವಸಂತ ಗಬ್ಬಲಡ್ಕ, ಕೆ‌.ಎಂ. ಹರೀಶ್ ಮೂರ್ಜೆ, ನೇತ್ರಕುಮಾರ ಪೇರೋಳಿ, ತಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಲಕ್ಷ್ಮೀನಾರಾಯಣ ಕಜೆಗದ್ದೆ, ಹೇಮಂತ್ ಮಠ, ಜಗನ್ನಾಥ ಮಾಣಿಮಜಲು, ಈಶ್ವರ ಕೊರ್ಬಂಡ್ಕ, ದಿವಾಕರ ಕಾಳಪ್ಪಜ್ಜನಮನೆ, ಗಂಗಾಧರ ಗೌಡ ಕಣಜಾಲು, ಕುಮಾರ ಕಾರಿಂಜ ಮಹೇಂದ್ರ ಕನಕಮಜಲು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಪ್ರಭಾಕರ ಕಂಚಿಲ್ಪಾಡಿ, ಲವಕುಮಾರ ಮಾಣಿಕೋಡಿ, ಗೋಪಾಲ ಪಂಜಿಗುಂಡಿ, ಸತೀಶ ಬೊಮ್ಮೆಟ್ಟಿ, ವೆಂಕಟ್ರಮಣ ಕಜೆಗದ್ದೆ ಸಹಕರಿಸಿದರು.