ಸುಬ್ರಹ್ಮಣ್ಯದಿಂದ ರೈತ ರಕ್ಷಣಾ ಚಳವಳಿ ಆರಂಭ

0


ಚಳಿಗಾಲದ ವಿಧಾನ ಸಭಾ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಪ್ರಶ್ನೆ ಮಾಡ್ತೇನೆ : ಭಾಗೀರಥಿ ಮುರುಳ್ಯ


ಮಲೆ ನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವ

ಮಲೆ ನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸುಬ್ರಹ್ಮಣ್ಯದಿಂದ ರೈತ ರಕ್ಷಣಾ ಚಳವಳಿ ಆರಂಭ ನ.೮ ರಂದು ಆರಂಭವಾಯಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, ಎಲ್ಲರೂ ಅವರ ಅವರ ಕಾನೂನು ಬಗ್ಗೆ ಹೋರಾಟ ಮಾಡ್ತಾರೆ. ರೈತರ ಹೋರಾಟಕ್ಕೆ ನನ್ನ ಬೆಂಬಲವಿದೆ. ಮುಂದಿನ ವಿಧಾನ ಸಭಾ ಅಧಿವೇಶನ ಕಸ್ತೂರಿ ರಂಗನ್ ವರದಿ ಬಗ್ಗೆ ಪ್ರಶ್ನೆ ಮಾಡುತ್ತೇನೆ. ಈ ಬಗ್ಗೆ ನಿಯೋಗ ಕೊಂಡೊಯ್ಯಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು ಭಾಗೀರಥಿ ತಿಳಿಸಿದರು.

ಆದರ್ಶ್ ಜೊಸೆಫ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಅಪಾಯ ಕಟ್ಟಿಟ್ಟಬುತ್ತಿ. ತನ್ನಷ್ಟಕ್ಕೆ ಒಕ್ಕಳೇಲುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿ ಆಗ್ತದೆ. ಕೇರಳದಲ್ಲಿ ಇದ್ದ ಹಾಗೇ ಜಾತ್ಯಾತೀತವಾಗಿ, ಪಕ್ಷ ಬೇದ ಮರೆತು ಕಾನೂನಾತ್ಮಕ ಹೋರಾಟ ಮಾಡಿದರೆ ಮಾತ್ರ ನಮ್ಮ ಹೋರಾಟ ಸಮರ್ಪಕ ಎಂದು ನುಡಿದರು.

ವೆಂಕಪ್ಪ ಗೌಡ ಮಾತನಾಡಿ, ಈ ಹಿಂದಿನ ಎಲ್ಲಾ ಸರ್ಕಾರಗಳು ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಿತ್ತು. ಬಿಜೆಪಿಯೂ ಮಾಡಿತ್ತು ಕಾಂಗ್ರೆಸ್ ಮಾಡಿತ್ತು. ಆದರೆ ಇಲ್ಲಿ ಕಾರ್ಯಗತವಾಗ ಬೇಕಾದರೆ ನಮ್ಮ ಭಾಗದ ಸಂಸದರು ಇದರ ಬಗ್ಗೆ ಕಾರ್ಯಗತವಾಗಬೇಕು, ಕೇಂದ್ರವನ್ನೇ ಒತ್ತಾಯ ಮಾಡಬೇಕು ನಾನು ನಿಮ್ಮೊಂದಿಗೆ ಖಂಡಿತ ಇದ್ದೇನೆ. ಈ ಬಗ್ಗೆ ಫ್ರೀ ವಕಾಲತು ನಾನು ಮಾಡ್ತೇನೆ ಎಂದರು.

ವೆಂಕಟ್ ದಂಬೆಕೋಡಿ ಮಾತನಾಡಿ ನ್ಯಾಯಯುತ ಹೋರಾಟಕ್ಕೆ ಹುದ್ದೆ ಕಳಕೊಂಡವರು ಕಿಶೋರ್ ಶಿರಾಡಿ ಅವರು. ಹೋರಾಟ ಪಕ್ಷ ಬೇದವಾಗಿರುತ್ತದೆ. ನಾನು ಕೂಡ ಪಕ್ಷ ಬೇದ ಮರೆತು ಇದರಲ್ಲಿ ಪಾಲ್ಗೊಳ್ಳುತಿದ್ದೇನೆ. ಸಂಸದರ ಮೂಲಕ ಒತ್ತಾಯ ಮಾಡುವ. ನ್ಯಾಯಕ್ಕಾಗಿ ಹೋರಾಡುವ ಅನಿರ್ವಾಯತೆ ಇದೆ. ರೈತರ ಮೂಲಕ ಹೋರಾಟ ತಾರ್ಕಿಕ ಅಂತ್ಯ ಕಾಣ್ತದೆ. ೧೮೩೭ ರ ಹೋರಾಟ ಸುಳ್ಯದಲ್ಲೂ ಸ್ವಾತಂತ್ರ್ಯ ಹೋರಾಟ ಆರಂಭವಾಗಿತ್ತು. ಅಂತಹ ಒಂದು ಹೋರಾಟದ ಕಿಚ್ಚು ಇಲ್ಲಿಂದಲೇ ಆರಂಭವಾಗಲಿ ಎಂದು ನುಡಿದರು.

ಅಧ್ಯಕ್ಷತೆಯನ್ನು ಮಲೆ ನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅತಿಥಿಯಾಗಿ ಸೈಂಟ್ ಮೆರಿಸ್ ಚರ್ಚ್ ಗುತ್ತಿಗಾರು ಇದರ ಧರ್ಮಗುರು ರೆ|ಫಾ| ಆದರ್ಶ ಜೋಸೆಫ್, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ನ್ಯಾಯವಾದಿ ವೆಂಕಪ್ಪ ಗೌಡ, ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ ವೇದಿಕೆಯಲ್ಲಿದ್ದರು.
ಸುಜಾತಾ ಕಲ್ಲಾಜೆ ಪ್ರಾರ್ಥಿಸಿದರು. ಚಂದ್ರಹಾಸ ಶಿವಾಲ ಸ್ವಾಗತಿಸಿದರು. ತ್ರಿವೇಣಿ ದಾಮ್ಲೆ, ಸುಜಾತಾ ಕಲ್ಲಾಜೆ, ಚಂದ್ರಕಲಾ ರೈತ ಗೀತೆ ಹಾಡಿದರು. ದಾಮೋದರ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು.