ಇಂದು ಸುಳ್ಯದಲ್ಲಿ 30 ನೇ ವರ್ಷದ ಅಯ್ಯಪ್ಪ ದೀಪೋತ್ಸವ -ಭಕ್ತಿ ಗಾನಾರ್ಚನೆ, ಯಕ್ಷಗಾನ ಬಯಲಾಟ

0

ಸುಳ್ಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಆಶ್ರಯದಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 30 ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವವು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಇಂದು ನಡೆಯಲಿದೆ.

ಪ್ರಾತ:ಕಾಲ ಅರ್ಚಕ ಸುದರ್ಶನ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ದೀಪಾರಾಧನೆಯೊಂದಿಗೆ ಉಷಾ ಪೂಜೆಯು ನಡೆಯಿತು.
ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ಯಾಗಲಿರುವುದು.

ಸಂಜೆ ಗಂಟೆ 6.00 ಕ್ಕೆ ಅಯ್ಯಪ್ಪ ವೃತಧಾರಿಗಳ ಪಾಲ್ ಕೊಂಬು ಮೆರವಣಿಗೆಯ ಹಳೆಗೇಟು ಬಳಿಯಿಂದ ಹೊರಟು ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಅಯ್ಯಪ್ಪ ಸನ್ನಿಧಾನಕ್ಕೆ ಸಾಗಿ ಬರಲಿದೆ.
ರಾತ್ರಿ ಭಕ್ತಿ ಗಾನಾರ್ಚನೆ ಹಾಗೂ ಯಕ್ಷಗಾನ ಬಯಲಾಟ ಪ್ರದರ್ಶನ ವಾಗಲಿರುವುದು.
ನಾಳೆ ಪ್ರಾತ:ಕಾಲದಲ್ಲಿ ಅಯ್ಯಪ್ಪ ವೃತಧಾರಿಗಳಿಂದ
ಅಗ್ನಿ ಸೇವೆಯು ನಡೆಯಲಿರುವುದು.