ಸುಳ್ಯದ ಅಂಬಟಡ್ಕದಲ್ಲಿ ಮನೆ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

0


ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಸುಳ್ಯ ಕುರುಂಜಿಭಾಗ್‌ನ ಮನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ 35 ವರ್ಷದ ರಂಜಿತ್ ಎಂಬ ವ್ಯಕ್ತಿ ನ.೦೪ರಿಂದ ಕಾಣೆಯಾಗಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಮನೆಯ ಮಾಲಕರು ದೂರು ನೀಡಿದ್ದು ’ಕಾಸರಗೋಡು ಮೂಲದ ರಾಜೇಶ್ ಎಂಬ ವ್ಯಕ್ತಿ ಕುರುಂಜಿಭಾಗ್‌ನಲ್ಲಿರುವ ಕಾವೇರಿ ಡ್ರೈವಿಂಗ್ ಸ್ಕೂಲ್ ಮಾಲಕರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದು ಮನೆಯ ಕೆಳ ಅಂತಸ್ತಿನಲ್ಲಿ ಒಂದು ರೂಮ್‌ನಲ್ಲಿ ವಾಸಿಸುತ್ತಿದ್ದ. ನವಂಬರ್ ೪ರಂದು ಸಂಜೆ ೭.೩೫ಕ್ಕೆ ಮಾಲಕರೊಂದಿಗೆ ಮಾತನಾಡಿ ತನ್ನ ರೂಮಿಗೆ ಹೋಗಿದ್ದು, ಮರುದಿನ ಹೋಗಿ ರೂಂನಲ್ಲಿ ನೋಡಿದಾಗ ಆತ ಅಲ್ಲಿ ಕಾಣಿಸಲಿಲ್ಲ. ಸಿಸಿಟಿವಿ ಪರಿಶೀಲಿಸಿದಾಗ ರಾತ್ರಿ ೮.೩೫ಕ್ಕೆ ರೂಂನಿಂದ ಹೊರ ಹೋಗಿರುವ ದೃಶ್ಯ ಕಂಡುಬಂದಿದೆ. ಬಳಿಕ ಆತನನ್ನು ಹುಡುಕಾಡಿದ್ದು ಇದುವರೆಗೆ ಪತ್ತೆಯಾಗಿಲ್ಲ. ಆದ್ದರಿಂದ ಆತನನ್ನು ಹುಡುಕಿಕೊಂಡುವಂತೆ ಸುಳ್ಯ ಪೊಲೀಸ್ ಠಾಣೆಗೆ ಮನೆಯವರು ದೂರು ನೀಡಿರುವುದಾಗಿ ತಿಳಿದು ಬಂದಿದೆ.

ಈ ವ್ಯಕ್ತಿ ಎಲ್ಲಿಯಾದರು ಕಂಡು ಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸುಳ್ಯ ಪೊಲೀಸರು ಪ್ರಕಟಣೆ ನೀಡಿದ್ದಾರೆ.