ಸಜ್ಜಾಗುತ್ತಿದೆ ಅದ್ದೂರಿಯ ಕಬಡ್ಡಿ ಪಂದ್ಯಾಟದ ಕ್ರೀಡಾಂಗಣ

0

ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಕ್ಷಣ ಗಣನೆ

ಸುಳ್ಯದಲ್ಲಿ ನಡೆಯಲಿರುವ ಮೂರು ದಿನದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದ ಉತ್ಸವಕ್ಕೆ ಒಳ ಕ್ರೀಡಾಂಗಣದ ಸಿದ್ಧತೆಗಳು ಸಜ್ಜುಗೊಳ್ಳುತ್ತಿದೆ.

ಇಂಡೋರ್ ಸ್ಟೇಡಿಯಂ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದ್ದು ಹೊರಾಂಗಣದ ಝಗ ಮಗಿಸುವ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗುತ್ತಿದೆ‌.

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಆಯೋಜನೆ ಹಾಗೂ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ
ನ.17,18,19 ರಂದು ಮೂರು ದಿನಗಳು ಬಹಳ ಅದ್ದೂರಿಯ ಕಬಡ್ಡಿ ಪಂದ್ಯಾಟ 16 ತಂಡಗಳ ಭಾಗವಹಿಸುವಿಕೆಯಲ್ಲಿ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ರಾಷ್ಟ್ರ ಮಟ್ಟದ ತಂಡಗಳು ಪಂದ್ಯಾಟದಲ್ಲಿ ಸೆಣಸಾಟ ನಡೆಸಲಿರುವುದು.