ಎಸ್ಪಿ ರಿಷ್ವಂತ್ ಸುಳ್ಯ ಪೊಲೀಸ್ ಠಾಣೆಗೆ ಭೇಟಿ,ಠಾಣೆ ಮತ್ತು ಪರಿಸರ ವೀಕ್ಷಣೆ

0

ಪುತ್ತೂರು ವಿಭಾಗದ ಡಿ ವೈ ಎಸ್ ಪಿ ಡಾ.ಗಾನ ಪಿ ಕುಮಾರ್ ಉಪಸ್ಥಿತಿ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಇಂದು ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಸರ ವೀಕ್ಷಣೆ ನಡೆಸಿದರು.

ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಮತ್ತು ಠಾಣಾ ಪರಿಸರ ತಪಾಸಣೆ ಕಾರ್ಯ ವರ್ಷಕ್ಕೊಮ್ಮೆ ನಡೆಯಲಿದ್ದು
ಇದರ ಅಂಗವಾಗಿ ಮಂಗಳೂರು ಎಸ್ಪಿ ರಿಷ್ವಂತ್ ರವರು ಇಂದು ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಠಾಣಾ ಮತ್ತು ಪರಿಸರ, ಪೊಲೀಸ್ ಕ್ವಾರ್ಟರ್ಸ್ ಗಳ ತಪಾಶಣಾ ಕಾರ್ಯ ನಡೆಸಿದ್ದಾರೆ.

ಸುಳ್ಯ ಠಾಣಾ ವ್ಯಾಪ್ತಿಯ ಪೂರ್ತಿ ಪರಿಸರಕ್ಕೆ ತೆರಳಿ ವೀಕ್ಷಣೆ ನಡೆಸಿದ ಅವರು ಬಳಿಕ ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಮಾತನಾಡಿ ಅವರ ಆರೋಗ್ಯ ಮತ್ತು ಇತರ ಮೂಲಭೂತ ವಿಷಯಗಳ ಕುರಿತು ಚರ್ಚೆ ನಡೆಸಿ ಅವರ ಸಮಸ್ಯೆಗಳನ್ನು ಕೇಳಿಕೊಂಡರು. ಬಳಿಕ ಮಾತನಾಡಿ ಉತ್ತಮ ಕರ್ತವ್ಯ ನಿರ್ವಹಿಸುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಬಳಿಕ ಸುದ್ದಿಯೊಂದಿಗೆ ಮಾತನಾಡಿದ ಅವರು ಪೊಲೀಸ್ ಇಲಾಖೆ ವತಿಯಿಂದ ವರ್ಷಕ್ಕೊಮ್ಮೆ ನಮ್ಮ ವ್ಯಾಪ್ತಿಗೊಪಟ್ಟ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ತೆರಳಿ ಠಾಣೆ ಮತ್ತು ಪರಿಸರ ವೀಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಸುಳ್ಳಕ್ಕೆ ಭೇಟಿ ನೀಡಿ ವೀಕ್ಷಣೆಯನ್ನು ಮಾಡಿದ್ದೇವೆ.
ಸುಳ್ಯ ಪೊಲೀಸ್ ಠಾಣಾ ಕಟ್ಟಡ ನೂತನವಾಗಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಮೂಲಭೂತ ಸಮಸ್ಯೆಗಳು ಇಲ್ಲಿ ಕಂಡು ಬಂದಿಲ್ಲ.
ಸಣ್ಣಪುಟ್ಟ ಯಾವುದಾದರೂ ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪುತ್ತೂರು ವಿಭಾಗದ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್, ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಉಪಸ್ಥಿತರಿದ್ದರು.