ನ.21 ರಂದು ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

0

ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯು ನ.21ರಂದು ಸುಬ್ರಹ್ಮಣ್ಯ ‌ಉಪವಿಭಾಗ ಕಚೇರಿಯಲ್ಲಿ ನಡೆಯಲಿದೆ.

ನ.21 ಮಂಗಳವಾರದಂದು ಪೂರ್ವಾಹ್ನ 11:00 ಗಂಟೆಯಿಂದ 12:00 ಗಂಟೆಯವರೆಗೆ, ಅಧೀಕ್ಷಕ ಇಂಜಿನಿಯರ್(ವಿ), ಕಾರ್ಯ ಮತ್ತು ಪಾಲನಾ ವೃತ್ತ, ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಸುಳ್ಯ ಮತ್ತು ಸುಬ್ರಹಣ್ಣು ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯನ್ನು ಸುಬ್ರಹ್ಮಣ್ಯ ಉಪವಿಭಾಗ ಕಛೇರಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ಸುಬ್ರಹ್ಮಣ್ಯ ಉಪವಿಭಾಗ ಕಛೇರಿಯಲ್ಲಿ ಅಥವಾ ದೂರವಾಣಿ ಕರೆಯ (ದೂರವಾಣಿ ಸಂಖ್ಯೆ- 08257 .200699) .ಮುಖಾಂತರ ಸಲ್ಲಿಸಬಹುದು” ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.