ತೆಂಗು ಪ್ರದೇಶ ವಿಸ್ತರಣೆ ಸಹಿತ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಸವಲತ್ತುಗಳು

0

೨೦೨೩-೨೪ ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಪರಿಶಿಷ್ಟ ಜಾತಿಯ ೬೦ ಹಾಗೂ ಪರಿಶಿಷ್ಟ ಪಂಗಡದ ೪೦ ಜನ ರೈತರಿಗೆ ರಾಜ್ಯದೊಳಗೆ ತರಬೇತಿ ಕಾರ್ಯಕ್ರಮಕ್ಕೆ ಅನುದಾನವಿದ್ದು, ಆಸಕ್ತರು ಜಾತಿ ಪ್ರಮಾಣ ಪತ್ರ, ಆಧಾರ್ ಹಾಗೂ ಆರ್‌ಟಿಸಿ ಯೊಂದಿಗೆ ನ.೩೦ರೊಳಗೆ ಹಿರಿಯ ಸಹಾಯಕ ತೊಟಗಾರಿಕೆ ನಿರ್ದೇಶಕರು ಕಚೇರಿಗೆ ಅರ್ಜಿ ಸಲ್ಲಿಸುವುದು.
೨೦೨೩-೨೪ ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ತೆಂಗು ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಇತರೇ ರೈತರಿಗೆ ೪೦೦ ತೆಂಗಿನ ಗಿಡ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ೩೭೦ ತೆಂಗಿನ ಗಿಡ ಲಭ್ಯವಿದ್ದು, ಸಹಾಯಧನದಲ್ಲಿ ಉಚಿತವಾಗಿ ತೆಂಗಿನ ಸಸಿ ವಿತರಿಸಲಾಗುವುದು. ಕನಿಷ್ಟ ೦.೫ ಎಕ್ರೆಗೆ ೨೪ ರಿಂದ ಗರಿಷ್ಟ ೨.೫ ಎಕ್ರೆಗೆ ೧೨೩ ಗಿಡದ ವರೆಗೆ ಪ್ರದೇಶ ವಿಸ್ತರಣೆ ಕೈಗೊಳ್ಳಬಹುದು ಆಸಕ್ತ ರೈತರು ನ. ೨೫ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು.
೨೦೨೩-೨೪ ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲಗಳ ಅಭಿಯಾನ ತಾಳೆ ಬೆಳೆ ಯೋಜನೆಯಡಿ ತಾಳೆ ಬೆಳೆ ಹೊಸ ಪ್ರದೇಶ ವಿಸ್ತರಣೆಗೆ ತಾಲೂಕಿಗೆ ಪರಿಶಿಷ್ಟ ಜಾತಿ ರೈತರಿಗೆ ೦.೭೮ ಲಕ್ಷ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ೦.೫೭೩ ಲಕ್ಷ ಅನುದಾನ ಲಭ್ಯವಿದ್ದು ನೀರಾವರಿ ವ್ಯವಸ್ಥೆ ಇರುವಂತಹ ಆಸಕ್ತ ರೈತರು ಆರ್‌ಟಿಸಿ, ಆರ್‌ಡಿ ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ, ಆಧಾರ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ನ. ೨೫ ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸುವುದು.
೨೦೨೩-೨೪ ನೇ ಸಾಲಿನ ಪಿಎಂಕೆಎಸ್‌ವೈ ಯಡಿ ತೊಟಗಾರಿಕೆ ಬೆಳೆಗಳಿಗೆ ಹನಿ/ನೀರಾವರಿ ಘಟಕ ಅಳವಡಿಸಲು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ರೈತರಿಗೆ ಶೇ.೯೦ ರಂತೆ ೧ ಎಕ್ರೆಗೆ ಗರಿಷ್ಟ ರೂ.೨೩,೫೦೦ ಸಹಾಯಧನ ಲಭ್ಯವಿದ್ದು, ಆಸಕ್ತ ರೈತರು ನ.೨೫ ರೊಳಗೆ ಹೆಸರು ನೋಂದಾಯಿಸುವಂತೆ ತಿಳಿಸಿದೆ.ತಾಲೂಕಿಗೆ ಪರಿಶಿಷ್ಟ ಜಾತಿ ರೈತರಿಗೆ ೩.೧೦ ಲಕ್ಷ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ೦.೮೩ ಲಕ್ಷ ಅನುದಾನ ಲಭ್ಯವಿರುತ್ತದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ೨೦೨೩-೨೪ ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ರೈತರಿಗೆ ಟ್ರೈಕೋಡರ್ಮ ಒಟ್ಟು ೧೫೦೦ ಕೆ.ಜಿ. ಲಭ್ಯವಿದ್ದು ಸಹಾಯಧನ ರೂಪದಲ್ಲಿ ಉಚಿತವಾಗಿ ಟ್ರೈಕೋಡರ್ಮ ಪ್ರತಿ ಅರ್ಜಿಗೆ ಕನಿಷ್ಟ ೦.೫ ಎಕ್ರೆಗೆ ೩ ಕೆ.ಜಿ. ಹಾಗೂ ಗರಿಷ್ಟ ೨.೫ ಎಕ್ರೆಗೆ ೧೫ ಕೆ.ಜಿ. ನೀಡಲಾಗುವುದು, ಆಸಕ್ತ ರೈತರು ನ.೩೦ ರೊಳಗೆ ನಿಗದಿತ ಅರ್ಜಿಯೊಂದಿಗೆ ಆರ್‌ಟಿಸಿ, ಜಾತಿ ಪ್ರಮಾಣ ಪತ್ರ , ಆಧಾರ್, ಪಾಸ್ ಪುಸ್ತಕ ಜೆರಾಕ್ಸ್ ಸಲ್ಲಿಸಿ, ಪಡೆದುಕೊಳ್ಳುವುದು.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ೨೦೨೩-೨೪ ನೇ ಸಾಲಿನಲ್ಲಿ ತರಕಾರಿ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ ರೈತರಿಗೆ ೪೦೦ ಪ್ಯಾಕೆಟ್ ತರಕಾರಿ ಬೀಜಗಳು ಲಭ್ಯವಿದೆ. ಆಸಕ್ತ ರೈತರು ನ.೩೦ ರೊಳಗೆ ನಿಗದಿತ ನಮೂನೆಯ ಅರ್ಜಿ, ಪಹಣಿ ಪತ್ರ, ಆಧಾರ್ ಪ್ರತಿ, ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿ ತೋಟಗಾರಿಕೆ ಇಲಾಖೆ ಸುಳ್ಯ ಇಲ್ಲಿ ತರಕಾರಿ ಬೀಜವನ್ನು ಪಡೆದುಕೊಳ್ಳಲು ತಿಳಿಸಿದೆ.
ಸುಳ್ಯ ತಾಲೂಕಿನಲ್ಲಿ ಅಡಿಕೆ, ತೆಂಗು, ಜಾಯಿಕಾಯಿ ಒಣಗಿಸಲು ನಿರ್ಮಿಸುವ ಕಡಿಮೆ ವೆಚ್ಚದ ಕೊಳವೆಯಾಕಾರದ (ಖಟ್ಝZ Sಛ್ಝಿ ಈqsಛ್ಟಿ) ಪಾಲಿಟನೆಲ್ ಡ್ರೈಯರ್ ರಚನೆಗೆ ಅಗತ್ಯವಿರುವ ಏಈPಉಖ್ಖಿ ಶೀಟ್ ಗಳ ಖರೀದಿಗೆ ಪ್ರತಿ ಚದರ ಮೀಟರ್ ಗೆ ಶೇಕಡಾ ೪೦ರ ರೂ.೨೦ ಸಹಾಯಧನ ನೀಡಲಾಗುವುದು. ಮಳೆಯಿಂದ ಕೊಯ್ಲು ಮಾಡಿದ ಉತ್ಪನ್ನ ರಕ್ಷಿಸಿ ಒಣಗಿಸಲು ರೈತರು ಹೊಸದಾಗಿ ಪಾಲಿಟನೆಲ್ ನಿರ್ಮಿಸುವಲ್ಲಿ ಅಥವಾ ಈಗಾಗಲೇ ಇರುವ ಘಟಕಕ್ಕೆ ಹೊಸದಾಗಿ ಏಈPಉಖ್ಖಿಶೀಟ್ ಅಳವಡಿಸಿದಲ್ಲಿ ಸಹಾಯಧನ ಪಡೆಯಲು ನ.೨೫ ರೊಳಗೆ ಹೊಸದಾಗಿ ಖರೀದಿಸಿದ ಏಈPಉಖ್ಖಿ ಶೀಟ್ ನ (ಜಿ.ಎಸ್.ಟಿ. ಬಿಲ್) , ಅರ್ಜಿ ಪಹಣಿ ಪತ್ರ, ಆಧಾರ್ ಪ್ರತಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಪ್ರತಿಯನ್ನು ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಕೋರಿದೆ.