ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೆಪಿಎಸ್ ಬೆಳ್ಳಾರೆಗೆ ಸಮಗ್ರ ಪ್ರಥಮ ಸ್ಥಾನ

0

ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ ಇಲ್ಲಿ ನವಂಬರ್ 15,16ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕೆಪಿಎಸ್ ಬೆಳ್ಳಾರೆ ಸಮಗ್ರ ಪ್ರಥಮ ಸ್ಥಾನ ಪಡೆದಿದೆ.


ಕನ್ನಡ ಭಾಷಣ ಅಕ್ಷತಾ ಪ್ರಥಮ, ತುಳು ಭಾಷಣ ಪ್ರೇಕ್ಷ ರೈ ಪ್ರಥಮ, ಕವನ ವಾಚನ ಸಮನ್ವಿತಾ ಪ್ರಥಮ, ಆಶುಭಾಷಣ ಡಯಾನ ವೈ ಶೆಟ್ಟಿ ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣ ಅನ್ವೇಶ್ ಎನ್.ಕೆ. ಪ್ರಥಮ, ಅರೇಬಿಕ್ ಧಾರ್ಮಿಕ ಪಠಣ ಮಹಮ್ಮದ್ ತಮ್ಮ ಪ್ರಥಮ, ಜಾನಪದ ನೃತ್ಯ ಡಯಾನ ವೈ ಶೆಟ್ಟಿ ,ವಿಧಿತಾ, ಧನ್ಯಶ್ರೀ, ನಿಷ್ಕಲ, ಪ್ರಾಪ್ತಿ, ಮಾನ್ವಿ , ಸೃಜನ್, ಶಾಶ್ವತ್ ತಂಡ ಪ್ರಥಮ, ಚರ್ಚಾಸ್ಪರ್ಧೆ ಮಹಮ್ಮದ್ ನಶಾತ್ ದ್ವಿತೀಯ, ಇಂಗ್ಲಿಷ್ ಭಾಷಣ ಫಾತಿಮತ್ ರಿಝಾ ತೃತೀಯ, ಹಿಂದಿ ಭಾಷಣ ಫಾತಿಮತ್ ಶಬೀಬಾ ತೃತೀಯ, ಕವ್ವಾಲಿ ಮಹಮದ್ ತಮೀಮ್ , ಮಹಮದ್ ಶೈಬಾನ್, ಇ ಎಂ. ಸಹದ್ , ಮಹಮ್ಮದ್ ಶಿಹಾಬ್ , ಮಹಮದ್ ಪಾಹಿಮ್ , ಸೃಜನ್ ತಂಡ ತೃತೀಯ ಸ್ಥಾನ ಪಡೆದಿರುತ್ತಾರೆ.

ಡಿಸೆಂಬರ್ 1 ರಂದು ಮಂಗಳೂರಿನಲ್ಲಿ ನಡೆಯುವ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಗೆ ಪ್ರಥಮ ಸ್ಥಾನ ಪಡೆದ ಅಕ್ಷತಾ, ಪ್ರೇಕ್ಷ ರೈ, ಸಮನ್ವಿತಾ, ಅನ್ವೇಶ್ ಎನ್.ಕೆ. ಮಹಮ್ಮದ್ ತಮೀಮ್, ಡಯಾನ ವೈ ಶೆಟ್ಟಿ ತಂಡದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.