ಮಹಿಳಾ ಮಂಡಲಗಳ ಒಕ್ಕೂಟ, ಸುದ್ದಿ ಸಹಯೋಗದಲ್ಲಿ ನಡೆದ ಮುದ್ದು ಕಂದ ಫೊಟೋ ಸ್ಪರ್ಧೆಯ ಬಹುಮಾನ ವಿತರಣೆ ನ.23 ಕ್ಕೆ

0

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸುಳ್ಯ ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಸುಳ್ಯ ತಾಲೂಕು ಮಟ್ಟದ ಮುದ್ದು ಕಂದ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ನ.23 ರಂದು ಮಧ್ಯಾಹ್ನ 12 ಗಂಟೆಗೆ ಒಕ್ಕೂಟದ ಸಭಾ ಭವನದಲ್ಲಿ ನಡೆಯಲಿದೆ.

ಪ್ರಥಮ ಬಹುಮಾನವಾಗಿ ರೂ. 2000, ದ್ವಿತೀಯ ಬಹುಮಾನವಾಗಿ ರೂ. 1000, ತೃತೀಯ ಬಹುಮಾನ ವಾಗಿ ರೂ. 500 ಮತ್ತು 7 ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧಾಳುಗಳೆಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.