8 ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನಗಳ ವಿತರಣೆ

0

ಶಿಕ್ಷಣ ಫೌಂಡೇಶನ್, ಡೆಲ್ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಗ್ರಾಮ ಡಿ ಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಸುಳ್ಯ ತಾಲೂಕಿನಲ್ಲಿ ಆಯ್ಕೆಯಾದ 8 ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನಗಳಾದ ಮೊಬೈಲ್ ಮತ್ತು ಸ್ಪೀಕರ್ ಗಳ ವಿತರಣೆ ನ.27 ರಂದು ನಡೆಯಿತು.

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಹಾಗೂ ಸುಳ್ಯ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳದ ರಾಜಣ್ಣ ರವರ ಮುಖೇನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಂಥಾಲಯ ಮೇಲ್ವಿಚಾರಕರು, ತಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿಕ್ಷಣ ಫೌಂಡೇಶನ್ ನ ಗ್ರಾಮ ಡಿಜಿ ವಿಕಸನದ ಜಿಲ್ಲಾ ಸಂಯೋಜಕರಾದ ಲವಿಶ್ ಕುಮಾರ್ ಪಿ ಹಾಗೂ ತಾಲೂಕು ಸಂಯೋಜಕರಾದ ದಿನೇಶ್ ಡಿ ಎಸ್ ರವರು ಉಪಸ್ಥಿತರಿದ್ದು ಗ್ರಾಮ ಡಿಜಿ ವಿಕಸನದ ಬಗ್ಗೆ ಮಾಹಿತಿ ನೀಡಿದರು.