ರಾಷ್ಟ್ರೀಯ ಲಗೋರಿ ಪಂದ್ಯಾಟ : ನ.30ರಂದು ಸುಳ್ಯದಲ್ಲಿ ಪೂರ್ವಭಾವಿ ಸಭೆ

0

ಸುಳ್ಯದಲ್ಲಿ‌ ರಾಷ್ಟ್ರೀಯ ಲಗೋರಿ ಪಂದ್ಯಾಟ‌ ನಡೆಯಲಿದ್ದು ಈ ಕುರಿತು‌ ಚರ್ಚಿಸಲು ಪೂರ್ವಭಾವಿ ಸಭೆಯು ನ.30 ರಂದು ಸುಳ್ಯದಲ್ಲಿ ನಡೆಯಲಿದೆ ಎಂದು‌ ಲಗೋರಿ ಅಸೋಸಿಯೇಷನ್ ‌ರಾಜ್ಯಾಧ್ಯಕ್ಷ ದೊಡ್ಡಣ್ಣ ‌ಬರೆಮೇಲು ತಿಳಿಸಿದ್ದಾರೆ.

ಕಳೆದ 23 ವರ್ಷಗಳಿಂದ ಜಾನಪದ ಕ್ರೀಡೆಯಾದ ಲಗೋರಿ ಆಟದ ಬೆಳವಣಿಗೆಯಾಗುತ್ತಿದೆ. 2001ರಲ್ಲಿ ಲಗೊರಿ ಆಟದ ನಿಯಮಗಳನ್ನು ಪುಸ್ತಕ ರೂಪದಲ್ಲಿ ರಚಿಸಿ ರಾಜ್ಯಾಧ್ಯಂತ ಪ್ರಚಾರ ಪಡಿಸಿ, ಹಲವು ಜಿಲ್ಲೆಗಳಲ್ಲೂ ಜಿಲ್ಲಾ ಅಸೋಸಿಯೇಶನ್ ಅಸ್ತಿತ್ವಕ್ಕೆ ಬಂದಿದೆ. ಕಳೆದ ವರ್ಷ ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಶನ್‌ನ್ನು ಸ್ಥಾಪಿಸಿ ಲಗೋರಿ ಆಟವನ್ನು ಮತ್ತಷ್ಟೂ ವಿಸ್ತಾರಗೊಳಿಸಲಾಗಿದೆ. ಈಗ ಸ್ಕೂಲ್ ಗೇಮ್ ಫೆಡೆರೇಶನ್‌ಗೆ ಸೇರ್ಪಡೆಗೊಳಿಸಿದರೆ ಮಾತ್ರ ಅದನ್ನು ಶಾಲಾ ಕಾಲೇಜುಗಳ ಪಂದ್ಯಾಟದಲ್ಲಿ ನಡೆಸಲು ಸಾಧ್ಯ. ಈಗಾಗಲೇ ನಾನ್ ಒಲಂಪಿಕ್ ಅಸೋಸಿಯೇಶನ್‌ನವರು ಬೇರೆ ರಾಜ್ಯದಿಂದ ಬಂದು ಆಟದ ವೀಕ್ಷಣೆ ಮಾಡಿ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಮೈಸೂರಿನಲ್ಲಿ All India lagori Adhac Committee ಮಾಡಿ ಆಟವನ್ನು ಸ್ಕೂಲ್ ಗೇಮ್ ಗೆ ಸೇರ್ಪಡೆಗೊಳಿಸುವ ಪ್ರಯತ್ನದಲ್ಲಿದ್ದೇವೆ. ಅದಕ್ಕೆ ಈಗಾಗಲೇ ನಡೆದ ಪಂದ್ಯಾಟ ಹಾಗೂ ಕಾರ್ಯಾಗಾರದ ದಾಖಲೆಗಳನ್ನು ನೀಡಲಾಗಿದೆ. ಆದರೆ ಅಂತರಾಜ್ಯ ಪಂದ್ಯಾಟದ ದಾಖಲೆಗಳು ಇಲ್ಲದೆ ಇರುವ ಕಾರಣ ರಾಷ್ಟ್ರೀಯ ಪಂದ್ಯಾವಳಿ ನಡೆಸಬೇಕಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಇದರ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ಮಂಡ್ಯ ಜಿಲ್ಲೆಯಲ್ಲಿ ನಡೆಸಲು ಮಂಡ್ಯ ಜಿಲ್ಲಾ ಲಗೊರಿ ಅಸೊಸಿಯೇಶನ್‌ನವರು ಒಪ್ಪಿಕೊಂಡಿರುತ್ತಾರೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಹರಿಯಾಣ, ಮದ್ಯಪ್ರದೇಶ ಮತ್ತು ಉತ್ತರದ ರಾಜ್ಯಗಳಲ್ಲಿ ಈ ಬಗ್ಗೆ ಪಂದ್ಯಾಟ ನಡೆಸಲು ಆಡಾಕ್ ಕಮಿಟಿಯ ಸದಸ್ಯರಿಗೆ ಜವಾಬ್ದಾರಿ ನೀಡಲಾಗಿದೆ.

ಈ ಎಲ್ಲಾ ಉದ್ದೇಶದಿಂದ ರಾಷ್ಟ್ರೀಯ ಪಂದ್ಯಾವಳಿ ಸುಳ್ಯದಲ್ಲಿ ನಡೆದ ದಾಖಲೆ ಮುಂದೆ ಇತಿಹಾಸದ ಪುಟಗಳಲ್ಲಿ ಸೇರುತ್ತದೆ. ಹಾಗೂ ಇದರ ಪಾಲು ತಮಗೂ ಸಮರ್ಪಿತವಾಗುತ್ತದೆ. ಈ ಉದ್ದೇಶದಿಂದ ರಾಷ್ಟ್ರೀಯ ಲಗೋರಿ ಪಂದ್ಯಾಟ ನಡೆಸಲು ತಮ್ಮೆಲ್ಲರ ಸಹಕಾರ, ಮಾರ್ಗದರ್ಶನ ಬೇಕಾಗಿದೆ. ಈ ಬಗ್ಗೆ ಪೂರ್ವಬಾವಿ ಸಭೆಯನ್ನು ನ.30 ರಂದು ಗುರುವಾರ 2:00 ಗಂಟೆಗೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ಇವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಎಂದು‌ ಅವರು ತಿಳಿಸಿದ್ದಾರೆ