10 ವರ್ಷಗಳಿಂದ ಬಗೆಹರೆಯದ ಒಂದು ಪ್ರಕರಣ ಲೋಕ ಅದಾಲತ್ ನಲ್ಲಿ ಇತ್ಯರ್ಥ
ಸುಳ್ಯ ನ್ಯಾಯಾಲಯದಲ್ಲಿ ಡಿ 14 ರಂದು ನ್ಯಾಯಾಧೀಶರುಗಳ ನೇತೃತ್ವದಲ್ಲಿ ಲೋಕ ಅದಾಲತ್ ನಡೆಯಿತು.
ರಾಜಿಯಲ್ಲಿ ಇತ್ಯರ್ಥ ಪಡಿಸಲು ಸಾಧ್ಯವಿರುವ ಹಲವಾರು ಪ್ರಕರಣಗಳು ಪಕ್ಷಗಾರರು ಯಾವುದೇ ಶುಲ್ಕ, ಖರ್ಚು ವೆಚ್ಚವಿಲ್ಲದೇ ಲೋಕ ಅದಾಲತ್‌ನಲ್ಲಿ ಸರಿ ಪಡಿಸಿ ಕ್ಕೊಂಡರು. ಅದಾಲತ್ ನಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳಾದ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗ, ಕಾರ್ಮಿಕ, ವೇತನ, ವಿದ್ಯುತ್, ನೀರು, ಮೋಟಾರು ವಾಹನ ಪ್ರಕರಣ, ಕೌಟುಂಬಿಕ ಸಮಸ್ಯೆ, ಪತಿ ಪತ್ನಿ ಸಮಸ್ಯೆ ಪ್ರಕರಣ, ಜಾಗದ ತಕರಾರು ಸೇರಿದಂತೆ ರಾಜಿಯಲ್ಲಿ ಇತ್ಯರ್ಥ ಪಡಿಸಲು ಸಾಧ್ಯ ವಿರುವ ಇತರ ಸೇವಾ ಶುಲ್ಕದ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಲೋಕ ಅದಾಲತ್ ನಲ್ಲಿ ಅವಕಾಶ ನೀಡಲಾಗಿತ್ತು.ಗಂಭೀರ ಸ್ವರೂಪದ ಅಪರಾಧಿಕ ಪ್ರಕರಣಗಳನ್ನು ಹೊರತುಪಡಿಸಿ ಇತರೆ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳ ಕಕ್ಷಿದಾರರಿಗೆ ನೇರವಾಗಿ ಅಥವಾ ವಕೀಲರ ಮೂಲಕ ಲೋಕ ಅದಾಲತ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಸುಳ್ಯದ 2 ನ್ಯಾಯಾಲಯದ ಅದಾಲತ್ ನಲ್ಲಿ ಒಟ್ಟು 499 ಪ್ರಕರಣಗಳ ಪೈಕಿ 345 ಪ್ರಕರಣಗಳನ್ನು 62,78,422/-ಮೊತ್ತಕ್ಕೆ ಇತ್ಯರ್ಥ ಪಡಿಸಲಾಯಿತು.
ಜೆ ಎಂ ಎಫ್ ಸಿ ಹಿರಿಯ ನ್ಯಾಯಾಲಯದಲ್ಲಿ ನ್ಯಾಯಧೀಶರಾದ ಬಿ ಮೋಹನ್ ಬಾಬು ರವರ ನೇತೃತ್ವದಲ್ಲಿ 146 ಕ್ರಿಮಿನಲ್ ಪ್ರಕರಣಗಳಲ್ಲಿ 5,42,768 ರೂ ಹಾಗೂ 16 ಸಿವಿಲ್ ಪ್ರಕರಣಗಳಲ್ಲಿ 31,63,101 ರೂಗಳಲ್ಲಿ ಇತ್ಯರ್ಥ ಮೂಲಕ ಒಟ್ಟು 162 ಪ್ರಕರಣ ಇತ್ಯರ್ಥವಾಗಿ ಒಟ್ಟು 37,05,869 ರೂ
ಸಿವಿಲ್ ನ್ಯಾಯಾಲಯದ ನ್ಯಾಯಧೀಶರು ಕು. ಅರ್ಪಿತಾ ರವರ ನೇತೃತ್ವದಲ್ಲಿ 165 ಕ್ರಿಮಿನಲ್ ಪ್ರಕರಣಗಳಲ್ಲಿ 32,66,799 ರೂ 18 ಸಿವಿಲ್ ಪ್ರಕರಣದಲ್ಲಿ 6,30,033 ರೂ ಗಳ ಮೂಲಕ ಒಟ್ಟು 183 ಪ್ರಕರಣಗಳಲ್ಲಿ 38,96,832 ರೂಗಳಲ್ಲಿ ಇತ್ಯರ್ಥ ಗೊಂಡಿರುತ್ತದೆ.
ಈ ಲೋಕ ಅದಾಲತ್ ನಲ್ಲಿ ಸುಮಾರು 10 ವರ್ಷಗಳಿಂದ ಬಗೆಹರೆಯದ ಒಂದು ಪ್ರಕರಣ ನ್ಯಾಯಾಧೀಶರ ಸಮ್ಮುಖದಲ್ಲಿ ಇತ್ಯರ್ಥ ಗೊಂಡು ವಿಶೇಷ ವೆನಿಸಿತು.
ಕಲಾಪದಲ್ಲಿ ಹಿರಿಯ ನ್ಯಾಯಾಲಯದಲ್ಲಿ ಸಂಧಾನಕರಾಗಿ ವಕೀಲರಾದ ಅಶ್ವಿನ್ ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ಸಂಧಾನಕಾರರಾಗಿ ವಕೀಲರಾದ ದಿನೇಶ್ ಎನ್ ಭಾಗವಹಿಸಿದ್ದರು.
ಅದಾಲತ್ ನಲ್ಲಿ ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಹಾಗೂ ಪದಾಧಿಕಾರಿಗಳು, ಸದಸ್ಯರುಗಳು ನ್ಯಾಯಾಲಯದ ಸಿಬ್ಬಂಧಿ ಗಳು ಸಹಕರಿಸಿದರು.
ಲೋಕ ಅದಾಲತ್ ನಲ್ಲಿ ಕೆನರಾ ಬ್ಯಾಂಕ್, ಸಿಂಡಿಕೆಟ್ ಬ್ಯಾಂಕ್, ಮುತ್ತೋಟ್ ಫೈನಾನ್ಸ್, ಮುಂತಾದ ಸಂಸ್ಥೆ ಗಳು ಭಾಗವಹಿಸಿ ಒಟ್ಟು 552 ಸಾಲಗಾರರಲ್ಲಿ 19 ಪ್ರಕರಣ ಇತ್ಯರ್ಥಗೊಂಡಿದೆ. ತಮ್ಮ ತಮ್ಮ ಸಂಸ್ಥೆಗೆ ಸಾಲಗಾರರಿಂದ ಬರಲಿರುವ ಸಾಲದ ಮೊತ್ತವನ್ನು ಒನ್ ಟೈಮ್ ಸೆಟ್ಲ್ ಮೆಂಟ್ ಗೆ ಅವಕಾಶ ನೀಡಿ ಪರಿಹಾರ ಕಂಡು ಕ್ಕೊಂಡರು.
ಸಾಮಾನ್ಯ ಜನರಿಗೆ ಲಭ್ಯವಿರುವ ಪ್ರಮುಖ ಪರ್ಯಾಯ ವಿವಾದಗಳ ಪರಿಹಾರ ಕಾರ್ಯವಿಧಾನ ಲೋಕ ಅದಾಲತ್ ಆಗಿದ್ದು ವ್ಯಾಜ್ಯಪೂರ್ವ ಹಂತದಲ್ಲಿ ಬಾಕಿ ಇರುವ ವಿವಾದಗಳು/ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ/ ರಾಜಿ ಮಾಡಿಕೊಳ್ಳುವ ವೇದಿಕೆಯಾಗಿದೆ ಇದು. ಕಾನೂನು ಸೇವೆಗಳ ಪ್ರಾಧಿಕಾರಗಳ (LSA) ಕಾಯಿದೆ, 1987 ರ ಅಡಿಯಲ್ಲಿ, ಲೋಕ ಅದಾಲತ್ ನೀಡಿದ ಪ್ರಶಸ್ತಿಯನ್ನು ಸಿವಿಲ್ ನ್ಯಾಯಾಲಯದ ತೀರ್ಪು ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಅಂತಿಮ ಮತ್ತು ಎಲ್ಲಾ ಪಕ್ಷಗಳಿಗೆ ಬದ್ಧವಾಗಿದೆ ಮತ್ತು ಯಾವುದೇ ನ್ಯಾಯಾಲಯದ ಮುಂದೆ ಅದರ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸುವುದಿಲ್ಲ. ನ್ಯಾಯಾಲಯಗಳಲ್ಲಿನ ಪ್ರಕರಣಗಳ ಬಾಕಿಯನ್ನು ಕಡಿಮೆ ಮಾಡಲು ಮತ್ತು ವ್ಯಾಜ್ಯ ಪೂರ್ವ ಹಂತದಲ್ಲಿ ವಿವಾದಗಳನ್ನು ಇತ್ಯರ್ಥಗೊಳಿಸಲು, ಕಾನೂನು ಸೇವಾ ಸಂಸ್ಥೆಗಳು ತನಗೆ ಸೂಕ್ತವೆಂದು ತೋರುವ ಅಂತರದಲ್ಲಿ ಲೋಕ ಅದಾಲತ್‌ಗಳನ್ನು ಆಯೋಜಿಸುತ್ತವೆ.
ರಾಷ್ಟ್ರೀಯ ಲೋಕ ಅದಾಲತ್‌ಗಳನ್ನು ಎಲ್ಲಾ ತಾಲೂಕುಗಳು, ಜಿಲ್ಲೆಗಳು ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಪೂರ್ವ ನಿಗದಿತ ದಿನಾಂಕದಂದು ಏಕಕಾಲದಲ್ಲಿ ಆಯೋಜಿಸಲಾಗುತಿದ್ದು ಇದರಿಂದ ನೂರಾರು ಕಕ್ಷಿಧಾರರು ಇದರ ಪ್ರಯೋಜನವನ್ನು ಪಡೆದು ಕೊಳ್ಳುತ್ತಾರೆ.