ಕನ್ನಡ ಮತ್ತು ಮಲೆಯಾಳ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣ ಗೊಳ್ಳುತ್ತಿರುವ “ಜಾವಾ ಕಾಫಿ” ಎಂಬ ಸಿನೆಮಾದ ಅಂತಿಮ ಹಂತದ ಚಿತ್ರೀಕರಣ ಇದೇ ಶುಕ್ರ ಮತ್ತು ಶನಿವಾರಗಳಲ್ಲಿ ಸುಳ್ಯದ ಸ್ನೇಹ ಶಾಲೆಯಲ್ಲಿ ನಡೆಯಿತು. ಆದ್ರಿ ಸ್ಟಾರ್ ಫಿಲಂಸ್ ನಿರ್ಮಾಣದ ಈ ಚಿತ್ರವನ್ನು ಸ್ವತ: ನಾಯಕಿ ಪಾತ್ರ ನಿರ್ವಹಿಸುತ್ತಿರುವ ಸಾನ್ವಿಕಾ ರವರು ನಿರ್ದೇಶಿಸುತ್ತಿದ್ದಾರೆ. ನಾಯಕನಾಗಿ ಅಜಯ್ ವರ್ಧನ್ ಪಾತ್ರ ನಿರ್ವಹಿಸುತ್ತಿದ್ದು ಹಾಸನದ ಆರ್ಯ ರವರು ಸಹಾಯಕ VG ನಿರ್ದೇಶಕರಾಗಿದ್ದಾರೆ.
ಈಗಾಗಲೇ ವಯನಾಡ್, ಮಡಿಕೇರಿ, ಮಂಗಳೂರು ಮತ್ತು ಸಮುದ್ರತೀರದಲ್ಲಿ ಬಹುಪಾಲು ಚಿತ್ರೀಕರಣ ಮುಗಿದಿದೆ.