ಕ್ರೀಡೆಯು ಮನುಷ್ಯನ ಆರೋಗ್ಯವನ್ನು ವೃದ್ಧಿಸುತ್ತದೆ,: ಪಿ.ಬಿ.ಸುಧಾಕರ ರೈ
ಪೊಟ್ ಶಾಟ್ಸ್ ಕುರುಂಜಿಭಾಗ್ ಸುಳ್ಯ ಆಶ್ರಯದಲ್ಲಿ ಸ್ಪಿರಿಟ್ ಆಫ್ ಫ್ರೀಡಂ ಚಾಂಪಿಯನ್‌ಶಿಪ್ 2024 ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಸ್ನೂರ‍್ಸ್ ಪಂದ್ಯಾಟ. 14 ದಶಂಬರ 2024ಶನಿವಾರ ಇಂದು ಪ್ರಾರಂಭಗೊoಡಿತು. ಸುಳ್ಯ ವಾಣಿಜ್ಯ ವರ್ತಕ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರಾದ ಪಿ.ಬಿ ಸುಧಾಕರ ರೈ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಭಗವತಿ ಹಾರ್ಡ್ವರ‍್ಸ್ ಲ. ರಮೇಶ್ ಶೆಟ್ಟಿ ಸುಳ್ಯ ಇವರು ಚಾಂಪಿಯನ್ಸ್ ಟ್ರೋಫಿ ಅನಾವರಣಗೊಳಿಸಿದರು. ಕ್ಯೂ ಕ್ಲಬ್ ಮಾಲ್ಹಕರಾದ ಲಿಕೇಶ್ ,ಕುಸುಮಾಧರ ರೈ ಬೂಡು ಕ್ಯಾಂಬಸ್ ಫ್ಯಾನ್ಸಿ ಮಾಲ್ಹಕರಾದ ವಿಶ್ವನಾಥನ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು ಸಂಸ್ಥೆಯ ಮಲ್ಹಕರಾದ ಕಿಶೋರ್ ಕುಮಾರ್ ಶೆಟ್ಟಿ ಬೂಡು ಸ್ವಾಗತಿಸಿ ವಂದಿಸಿದರು. ಈ ಪಂದ್ಯಾಟವು ಶನಿವರ ಮತ್ತು ಭಾನುವಾರ ನಡೆಯಲಿರುವುದು ಎಂದು ಪಂದ್ಯಾಟ ಸಂಘಟಕರು ತಿಳಿಸಿದರು.