ಸಂಪಾಜೆ: ದೊಡ್ಡಡ್ಕ ಕೊರಗಜ್ಜ ದೈವದ ಸನ್ನಿಧಿಯಲ್ಲಿ ಹರಕೆಯ ಅಗೇಲು ಸೇವೆ

0

ದ.ಕ. ಸಂಪಾಜೆ ಗ್ರಾಮದ ದೊಡ್ಡಡ್ಕದ ಅತ್ಯಂತ ಕಾರಣಿಕ ಕೊರಗಜ್ಜ ದೈವದ ಸನ್ನಿಧಿಯಲ್ಲಿ ಹರಕೆಯ ಅಗೇಲು ಸೇವೆಯು ನ.27ರಂದು ರಾತ್ರಿ ಜರುಗಿತು.
ಒಟ್ಟು ಹದಿನಾರು ಹರಕೆಯ ಅಗೇಲು ಸೇವೆಯನ್ನು ದೈವಕ್ಕೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಪ್ರಸಾದ ಸ್ವೀಕರಿಸಿದರು.