ಕೊ.ಸಂಪಾಜೆ: ಶ್ರೀ‌. ಕ್ಷೇ. ಧ.ಗ್ರಾ. ಯೋಜನೆಯ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0

ಶ್ರೀ.ಕ್ಷೇತ್ರ.ಧರ್ಮಸ್ಥಳ.ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಇದರ ವತಿಯಿಂದ ಕೊಡಗು ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವವು ಡಿ.2ರಂದು ನಡೆಸಲಾಯಿತು.

ಕಾಲೇಜಿನ ಕನ್ನಡ ಉಪನ್ಯಾಸಕ ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಿ, ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಸಬ್ ಇನ್ಸ್ ಪೆಕ್ಟರ್ ಭಾಸ್ಕರ ಅವರು ಶಾಲಾ ವಿದ್ಯಾರ್ಥಿಗಳಿಗೆ ಮಾದಕ ವ್ಯಸನಗಳಿಂದ ದುಷ್ಪರಿಣಾಮ ಮತ್ತು ಮಾದಕ ವಸ್ತು ಉಪಯೋಗದಿಂದ ಆಗುವ ಮಾರಣಾಂತಿಕ ಕಾಯಿಲೆ, ದುಷ್ಟಟಗಳಿಗೆ ಬಲಿ ಇದರಿಂದ ಆಗುವ ದುಷ್ಪರಿಣಾಮಗಳು ಹಾಗೂ ಮಕ್ಕಳಿಗೆ ಆಗುವ ದೌರ್ಜನ್ಯಗಳಿಗೆ ಕಾನೂನು ಸಲಹೆ, ವಾಹನ ಚಲಾಯಿಸುವ ಸಂದರ್ಭ ತಮ್ಮಲ್ಲಿ ಇರಬೇಕಾದ ದಾಖಲಾತಿಗಳ ಬಗ್ಗೆ ಮನದಟ್ಟು ಆಗುವಂತೆ ಮಾಹಿತಿ ಮಾರ್ಗದರ್ಶನ ನೀಡಿದರು.
ಶಾಲಾ ಮುಖ್ಯೋಪಾಧ್ಯಯ ಐತ್ತಪ್ಪ ಅವರು ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಜಯಶ್ರೀ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ಯಶೋಧಾ, ಸೇವಾಪ್ರತಿನಿಧಿಗಳಾದ ಸುಮಿತ್ರ, ಜಯಲಕ್ಷ್ಮಿ ಕಾಲೇಜಿನ ಸಹ ಅಧ್ಯಾಪಕ ವೃಂದದವರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.