ಸಮಾರೋಪ ಸಮಾರಂಭದಲ್ಲಿ
ವಿಜೇತರಿಗೆ ಪ್ರಶಸ್ತಿ ಪ್ರದಾನ
ಸುಳ್ಯ ರಂಗಮಯೂರಿ ಕಲಾ ಶಾಲೆ ,ಸಿಗ್ನೇಚರ್ ಡ್ಯಾನ್ಸ್ ಕಂಪನಿ ಮೈಸೂರು,
ಸುದ್ದಿ ಮೀಡಿಯಾ ಸಹಯೋಗದಲ್ಲಿ ಡಿ.3 ರಂದು ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗಮಯೂರಿ ಕಲಾ ಶಾಲೆಯಲ್ಲಿ ತಾಲೂಕು ಮಟ್ಟದ ಸುಳ್ಯ ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2 ರ ಸೋಲೋ ಡ್ಯಾನ್ಸ್ ಸ್ಪರ್ಧೆಯು ಅದ್ದೂರಿಯಾಗಿ ನಡೆಯಿತು.
ಸ್ಪರ್ಧೆಯಲ್ಲಿ ಸುಮಾರು 75 ಮಂದಿ ಸ್ಪರ್ಧಾಳುಗಳು ನಾಲ್ಕು ವಿಭಾಗದಲ್ಲಿ ಭಾಗವಹಿಸಿದ್ದರು.
ಸಬ್ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್- ಸೋನಾ ಅಡ್ಕಾರ್, ದ್ವಿತೀಯ -ಹಾರ್ದಿಕ ಕೆರೆಕ್ಕೋಡಿ, ತೃತೀಯ- ತ್ರಯಾಕ್ಷ , ಚತುರ್ಥ – ಸಾನ್ವಿ, ಜೂನಿಯರ್ ವಿಭಾಗದಲ್ಲಿ ಚಾಂಪಿಯನ್- ಜನ್ವಿ ಎಂ, ದ್ವಿತೀಯ -ಸ್ವರ ಎನ್.ಎಲ್, ತೃತೀಯ- ಸಿಂಚನಾ ಎನ್.ಪಿ, ಚತುರ್ಥ- ಅಸ್ಮಿ ಕೆ.ಪಿ, ಸೀನಿಯರ್ ವಿಭಾಗದಲ್ಲಿ ಚಾಂಪಿಯನ್ -ಜಸ್ಮಿತಾ ಕೆ.ಆರ್, ದ್ವಿತೀಯ- ಮೋಕ್ಷಾ ವೈ, ತೃತೀಯ- ಅನನ್ಯ ಕೆ, ಚತುರ್ಥ – ವರ್ಷ ಎಂ, ಕ್ಲಾಸಿಕಲ್ ವಿಭಾಗದಲ್ಲಿ ಚಾಂಪಿಯನ್- ವಿನಿತ ಪಿ, ದ್ವಿತೀಯ- ಅಕ್ಷಿತಾ ನೀರ್ಪಾಡಿ, ತೃತೀಯ- ನಿಧಿ ಕೆ, ಚತುರ್ಥ – ಯಶಿಕಾ ಕೆದಂಬಾಡಿ ಯವರು ಬಹುಮಾನ ಪಡೆದುಕೊಂಡರು.
ಅಪರಾಹ್ನ ಆರಂಭಗೊಂಡ ಸ್ಪರ್ಧೆಯು ರಾತ್ರಿ ತನಕ ನಿರಂತರವಾಗಿ ನಡೆಯಿತು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶರತ್ ಅಡ್ಕಾರ್, ಸುದ್ದಿ ವರದಿಗಾರ ಕೃಷ್ಣ ಬೆಟ್ಟ, ಸಿಗ್ನೇಚರ್ ಡ್ಯಾನ್ಸ್ ಕಂಪನಿಯ ಅಧ್ಯಕ್ಷ ವಿನೋದ್ ಕರ್ಕೇರ, ಡಿ.ಕೆ.ಡಿ. ಡ್ಯಾನ್ಸ್ ಸ್ಪರ್ಧೆಯ ವಿನ್ನರ್ ರಾಹುಲ್, ಡ್ಯಾನ್ಸ್ ಮಾಸ್ಟರ್ ಪೃಥ್ವಿ ನಾಯಕ್, ರಂಜಿತ್ ಅಡ್ತಲೆ, ಪ್ರಶಾಂತ್ ಊರುಬೈಲು, ಕುಂ.ಕುಂ ಫ್ಯಾಶನ್ ಮಾಲಕ ಧನ್ ರಾಮ್ ಪಟೇಲ್, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮನೆ, ಪೋಷಕರಾದ ಶ್ರೀಮತಿ ಉಷಾ ಶೆಟ್ಟಿ, ಶ್ರೀಮತಿ ಜಯಕೃಷ್ಣ, ಶ್ರೀಮತಿ ಸೌಮ್ಯ ರಾಘವೆಂದ್ರ, ಶ್ರೀಮತಿ ಪ್ರಮಿಳಾ ಪುತ್ತಿಲ, ಶ್ರೀಮತಿ ಸವಿತಾ ನಾರ್ಕೋಡು, ರಂಗಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದರು.
ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಕಲಾ ಶಾಲೆಯ ಪೋಷಕ ಕಮಿಟಿಯ ಸದಸ್ಯರು ಹಾಗು ವಿದ್ಯಾರ್ಥಿಗಳು ಸಹಕರಿಸಿದರು.
ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು.