ಶತಮಾನೋತ್ಸವದ ಸಂಭ್ರಮದಲ್ಲಿ ಕೊಯಿಕುಳಿ ಹಿ.ಪ್ರಾ.ಶಾಲೆ

0

ನೂತನ ಸುಸಜ್ಜಿತ ಸಭಾಭವನಕ್ಕೆ ಗುದ್ದಲಿಪೂಜೆ

ದುಗ್ಗಲಡ್ಕದ ಕೊಯಿಕುಳಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿದ್ದು ಈ ಸವಿನೆನಪಿಗಾಗಿ ನೂತನ ಸಭಾಭವನ ನಿರ್ಮಾಣವಾಗಲಿದ್ದು, ನಿರ್ಮಾಣ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.


ಸುಮಾರು 35 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸುಸಜ್ಜಿತ ಸಭಾಭವನಕ್ಕೆ ಎಂಆರ್‌ಪಿಎಲ್ ವತಿಯಿಂದ 25 ಲಕ್ಷ ಮಂಜೂರುಗೊಂಡಿರುತ್ತದೆ.ಉಳಿದ ಮೊತ್ತವನ್ನು ಹಿರಿಯ ವಿದ್ಯಾರ್ಥಿಗಳು, ಊರ ವಿದ್ಯಾಭಿಮಾನಿಗಳು ಮತ್ತು ದಾನಿಗಳ ಸಹಾಯದಿಂದ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಅಲ್ಲದೆ ಸಭಾಭವನ ನಿರ್ಮಾಣದ ಬಳಿಕ ಶಾಲಾ ಶತಮಾನೋತ್ಸವ ಸಮಾರಂಭ ನಡೆಯಲಿದೆ.


ಇಂದು ಬೆಳಿಗ್ಗೆ ಪೂಜಾವಿಧಿಗಳ ನೆರವೇರಿಸಿ ಗುದ್ದಲಿ ಪೂಜೆಯನ್ನು ನಡೆಸಲಾಯಿತು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಎಂ.ಜೆ., ಗೌರವಾಧ್ಯಕ್ಷರಾದ ಸುರೇಶ್ಚಂದ್ರ ಕಮಿಲ,ಹೇಮಂತ್ ಕುಮಾರ್ ಕಂದಡ್ಕ, ಸಂಚಾಲಕ ಕೆ. ಟಿ. ವಿಶ್ವನಾಥ್, ಶಾಲಾ ಮುಖ್ಯ ಶಿಕ್ಷಕ ಮಾಧವ ಎಂ., ಕೋಶಾಧಿಕಾರಿ ಶಂಭಯ್ಯ ಪಾರೆ ,ನಗರ ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ರೈ ದುಗ್ಗಲಡ್ಕ,ಶಶಿಕಲಾ ಎ.ನೀರಬಿದಿರೆ, ಎಸ್. ಡಿ. ಎಂ. ಸಿ. ಅಧ್ಯಕ್ಷೆ ಶೀಲಾವತಿ ಮಾಧವ, ಕಟ್ಟಡ ನಿರ್ಮಾಣಗಾರರಾದ ವಿಜಯ ಇಂಜಿನಿಯರ್, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಭವಾನಿ ಶಂಕರ ಕಲ್ಮಡ್ಕ, ಪದಾಧಿಕಾರಿಗಳಾದ ಕೆ. ರಾಮಕೃಷ್ಣ ಭಟ್, ನಾರಾಯಣ ಟೈಲರ್, ಸೀತಾನಂದ ಬೇರ್ಪಡ್ಕ, ಇಬ್ರಾಹಿಂ ನೀರಬಿದಿರೆ, ರಜೀಶ್ ನೀರಬಿದಿರೆ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಭಾಸ್ಕರ ಗೌಡ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಗಂಗಾಧರ ನೀರಬಿದಿರೆ, ಸದಸ್ಯರಾದ ಲೋಕೇಶ್ ದುಗ್ಗಲಡ್ಕ, ಜೀವನ ಪ್ರಕಾಶ್ ಕೆ., ಬಾಬು ಬೇರ್ಪಡ್ಕ ಮೊದಲಾದವರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿಗಳ ಮತ್ತು ವಿದ್ಯಾಭಿಮಾನಿಗಳ ಸಹಕಾರ ಅಗತ್ಯ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯಿಕುಳಿ ಇಲ್ಲಿ ಶತಮಾನೋತ್ಸವದ ನೆನಪಿಗಾಗಿ ಸಭಾಭವನ ನಿರ್ಮಾಣಕ್ಕಾಗಿ ಪ್ರತಿಷ್ಠಿತ ಎಂ.ಆರ್.ಪಿ.ಎಲ್ ಸಂಸ್ಥೆಯು 25ಲಕ್ಷ ರುಪಾಯಿ ದೇಣಿಗೆ ಮಂಜೂರು ಮಾಡಿರುತ್ತದೆ.
ಸುಮಾರು 35ಲಕ್ಷ ಅಂದಾಜು ಪಟ್ಟಿಯ ವೆಚ್ಚದಲ್ಲಿ ಸುಸಜ್ಜಿತ ಸಭಾಭವನ ನಿರ್ಮಾಣದ ಗುರಿ ಹೊಂದಿರುವ ನಮಗೆ ಎಂ.ಆರ್.ಪಿ.ಎಲ್ ಸಂಸ್ಥೆಯ ವತಿಯಿಂದ ಮಂಜೂರಾಗುವ ದೇಣಿಗೆಯಿಂದಾಗಿ ದೊಡ್ಡ ಆರ್ಥಿಕ ಶಕ್ತಿ ಒದಗಿ ಬಂದಂತಾಗಿದ್ದು, ಉಳಿದ ಖರ್ಚು ವೆಚ್ಚಗಳಿಗೆ ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಮತ್ತು ದಾನಿಗಳಿಂದ ಒಟ್ಟುಗೂಡಿಸಿ ನಮ್ಮ ಊರಿನ ನಮ್ಮದೇ ಶಾಲೆಯಲ್ಲಿ ಸುಸಜ್ಜಿತ ಸಭಾಭವನ ಜನೋಪಯೋಗಕ್ಕಾಗಿ ಲೋಕಾರ್ಪಣೆಗೊಳಿಸುವ ಗುರಿಯನ್ನು ನೆರವೇರಿಸಿ ಕೊಡುವರೇ,
ತಮ್ಮ ತನು ಮನ ಧನ ಸಹಾಯವನ್ನು ನೀಡಬೇಕು.

ಶಶಿಧರ ಎಂ. ಜೆ.
ಅಧ್ಯಕ್ಷರು
ಶತಮಾನೋತ್ಸವ ಸಮಿತಿ