ಸಂಪಾಜೆ ಸಹಕಾರಿ ಸಂಘದ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ

0

ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 2024 ನೇ ಸಾಲಿನ ಕ್ಯಾಲೆಂಡರನ್ನು ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ರವರು ಡಿ.12ರಂದು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ವೀರೇಂದ್ರ ಕುಮಾರ್ ಜೈನ್, ನಿರ್ದೇಶಕರಾದ ಗಣಪತಿ ಭಟ್ ಪಿ. ಎನ್, ಆನಂದ ಪಿ. ಎಲ್, ಸುಮತಿ ಎಸ್, ಜಗದೀಶ ರೈ ಕೆ. ಆರ್, ಯಮುನಾ ಬಿ. ಎಸ್, ಹಮೀದ್ ಹೆಚ್, ಜಾನಿ ಕೆ. ಪಿ, ಪ್ರಕಾಶ್ ಕೆ. ಪಿ, ರಾಜೀವಿ ಕೆ. ಹಾಗೂ ಸಿಬ್ಬಂದಿಗಳು ಹಾಜರಿದ್ದರು.