ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಫಾರಂ 3 ಖಾತೆ‌ ನೀಡುವ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆ ಕುರಿತು ಸುಳ್ಯ ಶಾಸಕರು‌ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಿ

0

ಸುಳ್ಯ ನ.ಪಂ.‌ ಸದಸ್ಯ ರಿಯಾಜ್ ಕಟ್ಟೆಕಾರ್ ಸಲಹೆ

ಸುಳ್ಯ‌ ನಗರ ಪಂಚಾಯತ್ ವ್ಯಾಪ್ತಿಯಲ್ಲಿ‌, ಫಾರಂ 3 ಕೊಡಲು ಆಗುತ್ತಿರುವ ಸಮಸ್ಯೆಗೆ,ಶಾಶ್ವತ ಪರಿಹಾರ‌ ಕುರಿತು ಸುಳ್ಯದ ಶಾಸಕರಾದ ಶ್ರೀ ಭಾಗೀರಥಿ ‌ಮುರುಳ್ಯರವರು ಚಳಿಗಾಲ ಅಧಿವೇಶನದಲ್ಲಿ ಸರಕಾರದ ‌ಗಮನ ಸೆಳೆಯಬೇಕು ಎಂದು‌ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ಮನವಿ ಮಾಡಿಕೊಂಡಿದ್ದಾರೆ.

‌ನಗರ ಪಂಚಾಯತ್ ವ್ಯಾಪ್ತಿಯಲ್ಲಿ,ಆರ್.ಟಿ.ಸಿ. ಬದಲಾಗಿ ಸೂಡಾ ನಿಯಮದಂತೆ ಫಾರಂ 3 ಖಾತೆ ನೀಡುವುದು ಕಳೆದ ಸುಮಾರು 5-6 ವರ್ಷಗಳಿಂದ ಜಾರಿಯಲ್ಲಿರುತ್ತದೆ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿ‌ ಹೊರತು ಪಡಿಸಿ ಉಳಿದೆಲ್ಲ ನಗರಗಳಲ್ಲಿ,ಸೂಡಾ ನಿಯಮದಲ್ಲಿ ಸಡಿಲಿಕೆ ಇರುತ್ತದೆ . ಆದರೆ ಸುಳ್ಯದಲ್ಲಿ ಸೂಡ ನಿಯಮಗಳಿಗೆ ಸಡಿಲಿಕೆ ಮಾಡದೆ, ಫಾರಂ -3 ಖಾತೆ,ಕಳೆದ 5-6 ವರ್ಷದಿಂದ, ಕೇವಲ ಶ್ರೀಮಂತರಿಗಷ್ಟೇ ಸೀಮಿತವಾಗಿದೆ ಎಂದು ಜನತೆ ಆಡಿಕೊಳ್ಳುತಿದ್ದು, ನಗರದ ಬಡ ಜನರು ತಮ್ಮ ಆಸ್ತಿ ಮೇಲೆ ಸಾಲ ಪಡೆಯಲು, ಹಾಗೂ ಇತರೆ ವ್ಯವಹಾರ ಆಗದೆ ಅನೇಕ ಸಮಸ್ಯೆ ಎದುರಿಸುತಿದ್ದಾರೆ.


ಆದ್ದರಿಂದ ‌ಸುಳ್ಯ ನಗರದ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಸೂಡಾ ನಿಯಮದಿಂದ ಆಗುತ್ತಿರುವ ಸಮಸ್ಯೆಯನ್ನು, ಅಧಿವೇಶನದಲ್ಲಿ ಮಾನ್ಯ ಶಾಸಕರು ಮಂಡಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕಾಗಿ ನಾವು ಮನವಿ ಮಾಡುತ್ತೇವೆ. ಜತೆಗೆ ನಗರ ಪಂಚಾಯತ್ ನ ಎಲ್ಲ ಸದಸ್ಯರು ಕೂಡಾ ಶಾಸಕರನ್ನು ಈ‌ಬಗ್ಗೆ ಒತ್ತಾಯಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.