ದುಗ್ಗಲಡ್ಕದಿಂದ ಸುಳ್ಯಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಬೆಳಗ್ಗಿನ ವೇಳೆ ಹೆಚ್ಚುವರಿ ಸಾರಿಗೆ ಬಸ್ಸಿನ‌ ವ್ಯವಸ್ಥೆ ಮಾಡುವಂತೆ‌ ವಿದ್ಯಾರ್ಥಿಗಳ ಮನವಿ

0

ದುಗ್ಗಲಡ್ಕ ಭಾಗದಿಂದ‌ ಸುಳ್ಯದ ಶಾಲಾ‌ಕಾಲೇಜುಗಳಿಗೆ ಸರಕಾರಿ ಬಸ್ಸುಗಳಲ್ಲಿ ತೆರಳುವ ವಿದ್ಯಾರ್ಥಿ ಗಳು‌ ಬಸ್ಸು ನಿಲ್ಲಿಸದೇ ಇರು ವ ಕಾರಣ ತೊಂದರೆಗೆ ಒಳಗಾಗಿದ್ದಾರೆ.‌ ಹೀಗಾಗಿ ಮುಂಜಾನೆ ಶಾಲೆಗೆ ತೆರಳಲು ಹೆಚ್ಚುವರಿ ಬಸ್ಸಿನ‌ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು‌ ಶಾಸಕರಿಗೆ, ತಹಶೀಲ್ದಾರರಿಗೆ, ಸುಳ್ಯ ಡಿಪೋ ಮ್ಯಾನೇಜರ್ ಗೆ ಮನವಿ ಸಲ್ಲಿಸಿದ್ದಾರೆ.

ದುಗ್ಗಲಡ್ಕ, ನೀರಬಿದಿರೆ, ಕೊಯಿಕುಳಿ, ಕಂದಡ್ಕ, ಕೂಟೇಲು ಪರಿಸರದ ಬಹುತೇಕ‌ ಎಲ್ಲಾ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಸುಳ್ಯದ ಶಾಲಾ‌ ಕಾಲೇಜನ್ನು‌ ಆಶ್ರಯಿಸಿದ್ದಾರೆ. ದುಗ್ಗಲಡ್ಕದಿಂದ ಸುಳ್ಯಕ್ಕೆ ಹೋಗಲು ಸುಬ್ರಹ್ಮಣ್ಯದಿಂದ ಬರುವ ಬಸ್ 8:00ಕ್ಕೆ, ಮರ್ಕಂಜ ದಿಂದ ಬರುವ ಬಸ್ 8:10ಕ್ಕೆ, ಕೊಲ್ಲಮೊಗ್ರದಿಂದ‌ ಬರುವ ಬಸ್ 8.20ಕ್ಕೆ ದುಗ್ಗಲಡ್ಕ ಕ್ಕೆ ತಲುಪುತ್ತದೆ. ಆದರೆ ಈ ಬಸ್ಸುಗಳಲ್ಲಿ‌ ವಿದ್ಯಾರ್ಥಿಗಳು ತುಂಬಿ‌ ಹೋಗುವುದರಿಂದ ದುಗ್ಗಲಡ್ಕದಲ್ಲಿ ಬಸ್ ನಿಲ್ಲಿಸುತ್ತಿಲ್ಲ.‌ ಇದರಿಂದಾಗಿ
ಬೆಳಿಗ್ಗೆ 9 ಗಂಟೆಗೆ ಶಾಲಾ ಕಾಲೇಜು ತಲುಪಲು ವಿದ್ಯಾರ್ಥಿಗಳಿಗೆ ಸಾಧ್ಯಾವಾಗದ ಪರಿಸ್ಥಿತಿ ಎದುರಾಗಿದೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ಬೆಳಿಗ್ಗೆ 9 ಗಂಟೆಗೆ ತರಗತಿಗಳು ಪ್ರಾರಂಭವಾಗುತ್ತಿರುವ ಕಾರಣ ಸಮಯಕ್ಕೆ‌ ಸರಿಯಾಗಿ‌ ತಲುಪಲು ಹೆಚ್ಚುವರಿ ಬಸ್ಸಿನ‌ ವ್ಯವಸ್ಥೆ ಮಾಡಿಕೊಡಬೇಕೆಂದು‌ ಈ ಭಾಗದ ವಿದ್ಯಾರ್ಥಿಗಳು ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ.‌

ವಿದ್ಯಾರ್ಥಿಗಳ ಪರವಾಗಿ ಪ್ರೀತಿಕಾ, ದೀಕ್ಷಿತ, ಕಾವ್ಯ, ರಮ್ಯ, ದೀಕ್ಷಿತಾ ಎ. ಮನವಿ ಸಲ್ಲಿಸಿದರು.