ರಾಷ್ಟ್ರೀಯ ಮತದಾರ ದಿನಾಚರಣೆ ಸ್ಫರ್ಧೆಯಲ್ಲಿ ಕೆ.ಎಸ್. ಗೌಡ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ನೇಹಾ ಬಿ. ಗೆ ಪ್ರಥಮ ಬಹುಮಾನ

0

ರಾಷ್ಟ್ರೀಯ ಮತದಾರರ ದಿನಾಚರಣೆ 2023 ಇದರ ಅಂಗವಾಗಿ ಏರ್ಪಡಿಸಲಾಗಿದ್ದ ಹಲವು ಸ್ಫರ್ಧೆಗಳ ಪೈಕಿ ‘ಭಿತ್ತಿ ಚಿತ್ರ ರಚನೆ’ ( ಪೋಸ್ಟರ್ ಮೇಕಿಂಗ್ ) ಸ್ಫರ್ಧೆಯಲ್ಲಿ ಕೆ. ಎಸ್. ಗೌಡ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ವರ್ಷನಗರ ನಿಂತಿಕಲ್ಲು ಇಲ್ಲಿನ ಹತ್ತನೇ ತರಗತಿ ವಿದ್ಯಾರ್ಥಿನಿ ಕು. ನೇಹಾ. ಬಿ ಇವರು ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.

‘ವಿಶೇಷ ಚೇತನ ಮತದಾರರಿಗೆ ಒದಗಿಸಿರುವ ಸೌಲಭ್ಯಗಳು’ ಎಂಬ ವಿಷಯದ ಕುರಿತು ಆಯೋಜಿಸಿದ್ದ ತಾಲೂಕು ಮಟ್ಟದ ಸ್ಫರ್ಧೆಯಲ್ಲಿ ಇವರು ಪ್ರಥಮ ಬಹುಮಾನ ಪಡೆದಿದ್ದರು. ಜಿಲ್ಲಾ ಮಟ್ಟದಲ್ಲಿ ‘ಶಾಲಾ ಸಂಸತ್ ಚುನಾವಣಾ ಚಿತ್ರ’ ಎಂಬ ವಿಷಯದ ಕುರಿತು ಜಿಲ್ಲಾ ಮಟ್ಟದ ಭಿತ್ತಿ ಚಿತ್ರ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.

ಕು. ನೇಹಾ. ಬಿ ಇವರು ಮುರಳೀಧರ ಬಾಲಾಡಿ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರಿಯಾಗಿರುತ್ತಾರೆ.