ಮೊಗರ್ಪಣೆ: ಸ್ವಚ್ಛ ಸುಂದರವಾಗಿ ನಿರ್ಮಾಣಗೊಂಡ ನೇತಾಜಿ ಪಾರ್ಕ್

0

ಕಾಡು ಬಳ್ಳಿಗಳಿಂದ ತುಂಬಿದ್ದ ಪಾರ್ಕನ್ನು ಸುಂದರಗೊಳಿಸಿದ ನಗರ ಪಂಚಾಯತ್

ಸುಳ್ಯ ಮೊಗರ್ಪಣೆಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಾಣವಾದ ನೇತಾಜಿ ಪಾರ್ಕ್ ಇದೀಗ ಸ್ವಚ್ಛ ಸುಂದರವಾಗಿ ಮಾರ್ಪಟ್ಟಿದೆ.

ಸುಳ್ಯ ಲಯನ್ಸ್ ಸಂಸ್ಥೆಯಿಂದ ಈ ಪಾರ್ಕಿನ ನಿರ್ಮಾಣ ಅಂದು ಆಗಿತ್ತು. ಬಳಿಕ ಅದನ್ನು ನಗರ ಪಂಚಾಯತಿಗೆ ಅದರ ನಿರ್ವಹಣೆಗೆ ನೀಡಲಾಗಿತ್ತು.

ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕಾಡು ಬಳ್ಳಿಗಳು ತುಂಬಿ ಸಾರ್ವಜನಿಕರ ಉಪಯೋಗಕ್ಕೂ ಬಾರದೆ ನಿಷ್ಪ್ರಯೋಜಕವಾಗಿದ್ದು.ಇದೀಗ ಸುಳ್ಯ ನಗರ ಪಂಚಾಯತ್ ವತಿಯಿಂದ ಕಳೆದ ಹತ್ತು ದಿನಗಳಿಂದ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು ಇದೀಗ ಪಾರ್ಕ್ ನೋಡುಗರ ಕಣ್ಮನ ಸೆಳೆಯುತ್ತಿದೆ.

ಈ ಪಾರ್ಕಿನ ಅವ್ಯವಸ್ಥೆಗಳ ಬಗ್ಗೆ ಹಲವಾರು ಬಾರಿ ಸುದ್ದಿ ಪತ್ರಿಕೆಗಳಲ್ಲಿ ವರದಿಗಳನ್ನು ಬಿತ್ತರಿಸಲಾಗಿತ್ತು. ಕೊನೆಗೂ ಎಚ್ಚೆತ್ತ ಅಧಿಕಾರಿಗಳು ಪಾರ್ಕಿನ ದೃಶ್ಯವನ್ನು ಬದಲಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಇಲ್ಲಿರುವ ಜೋಕಾಲಿಗಳು,ವಿಶ್ರಮಿಸುವ ಬೆಂಚುಗಳು,ಜಾರುಬಂಡಿಗಳಿಗೆ, ಗೋಡೆಗಳಿಗೆ, ಸುಂದರ ಬಣ್ಣವನ್ನು ಹಚ್ಚಿ ಪರಿಸರ ಸುಂದರತೆಯಿಂದ ಕೂಡಿದ್ದು ಕಂಡುಬರುತ್ತಿದೆ.


ನಗರ ಪಂಚಾಯತಿನ ಈ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.