ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡುವಂತೆ ಹಿಂದೂಪರಸಂಘಟನೆಯಿಂದ ಮನವಿ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ
ಚಂಪಾ ಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಸಂತೆ ವ್ಯಾಪಾರ ನಡೆಸಲು
ಅನ್ಯ ಮತೀಯರಿಗೆ ಅವಕಾಶ ನೀಡಬಾರದು ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಹಿಂದೂ ಜಾಗರಣ ವೇದಿಕೆ ಹಾಗೂ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಇಂದು ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಯವರ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅದೇಶದನ್ವಯ ಚಂಪಾಷಷ್ಠಿ ಮಹೋತ್ಸವ ಸಮಯದಲ್ಲಿ ಹಿಂದೂ ಬಾಂಧವರನ್ನು ಹೊರತು ಪಡಿಸಿಅನ್ಯಧರ್ಮದವರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಘಟನೆಯ ಕಾರ್ಯಕರ್ತರ ಮನವಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪನಾ ಸಮಿತಿಯು ಸಕಾರಾತ್ಮಕವಾಗಿ ಸ್ಪಂದಿಸಿ ನಿರ್ಣಯವನ್ನು ಕೈಗೊಂಡಿರುವುದಾಗಿ ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಹಿ.ಜಾ.ವೇದಿಕೆಯ
ಜಿಲ್ಲಾ ಸಂಯೋಜಕ್ ಮೋಹನ್ ದಾಸ್ ಕಾಣಿಯೂರು, ಹರಿಪ್ರಸಾದ್ ಕೊಲ್ಲಮೊಗ್ರ, ತಾಲೂಕು ಸಹ ಸಂಚಾಲಕ ಜೀವನ್, ನಗರ ಸಂಚಾಲಕ ವಿನೋದ್,
ಬಜರಂಗದಳ ಸಂಚಾಲಕ ಯದು ಚಂದ್ರ,
ಉಪಾಧ್ಯಕ್ಷ ಲಕ್ಷ್ಮೀಶ,
ಚಂದನ್.ಕೆ ಮತ್ತಿತರರು ಉಪಸ್ಥಿತರಿದ್ದರು.