ಅರಂತೋಡಿನಲ್ಲಿ ರಬ್ಬರ್ ಟ್ಯಾಪಿಂಗ್ ತರಬೇತಿ ಶಿಬಿರದ ಉದ್ಘಾಟನೆ

0

ಭಾರತೀಯ ರಬ್ಬರ್ ಮಂಡಳಿ ವತಿಯಿಂದ ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಸಹಯೋಗದಲ್ಲಿ ಮಹಿಳೆಯರಿಗಾಗಿ 8 ದಿನಗಳ ರಬ್ಬರ್ ಟ್ಯಾಪಿಂಗ್ ಉಚಿತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಡಿ.12 ರಂದು ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಸಭಾ ಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರು ಉದ್ಘಾಟಿಸಿ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿ ಟ್ಯಾಪಿಂಗ್ ಸಲಕರಣೆಗಳನ್ನು ವಿತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಶಶಿಕುಮಾರ್ ಉಳುವಾರು ವಹಿಸಿದ್ದರು. ವೇದಿಕೆಯಲ್ಲಿ ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿ ಪುತ್ತೂರಿನ ಸಹಾಯಕ ಅಭಿವೃದ್ಧಿ ಅಧಿಕಾರಿ ಸಜಿ ಮ್ಯಾಥ್ಯೂ, ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಪೂರ್ವಾಧ್ಯಕ್ಷರಾದ ಹೊನ್ನಪ್ಪ ಮಾಸ್ಟರ್ ಅಡ್ತಲೆ, ಸಂಪಾಜೆ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷರಾದ ಜಯರಾಮ.ಕೆ. ಸಿ., ತರಬೇತುದಾರರಾದ ಸೊಕ್ಕಲಿಂಗಮ್, ತರಬೇತಿಗೆ ರಬ್ಬರ್ ಮರಗಳ ದಾನಿಗಳಾದ ಯತೀಶ್ ಅಳಿಕೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಆರಂತೋಡು ಹಾಗೂ ಸಂಪಾಜೆ ರಬ್ಬರ್ ಉತ್ಪಾದಕರ ಸಂಘಗಳ ನಿರ್ದೇಶಕರುಗಳು ಹಾಗೂ ಈ ಸಂಘಗಳ ವ್ಯಾಪ್ತಿಯ 15 ಮಂದಿ ಶಿಬಿರಾರ್ಥಿ ಮಹಿಳೆಯರು ಭಾಗವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ವೆಂಕಟ್ರಮಣ ಪೆತ್ತಾಜೆ ಸಹಕಾರ ನೀಡಿದರು.


ತರಬೇತಿ ಶಿಬಿರವು 7 ದಿನಗಳ ಕಾಲ ಯತೀಶ್ ಅಳಿಕೆಯವರ ರಬ್ಬರ್ ತೋಟದಲ್ಲಿ ನಡೆಯಲಿದ್ದು ಕೊನೆಯ ದಿನದ ತರಬೇತಿ ಹಾಗೂ ಸಮಾರೋಪ ಸಮಾರಂಭವು ಮೇದಪ್ಪ ಉಳುವಾರುರವರ ರಬ್ಬರ್ ತೋಟದಲ್ಲಿ ನಡೆಯಲಿದೆ.