ಕನಕಮಜಲು ಗ್ರಾಮದ ಪೆರುಂಬಾರು ಮದಿಮಾಳುಮುಖ ಎಂಬಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ದುರ್ಗಾದೇವಿ ಅಮ್ಮನವರ ಸನ್ನಿಧಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯನ್ನು ಡಿ.10ರಂದು ರಚಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗೋಪಣ್ಣ ಗೌಡ ಪೆರುಂಬಾರು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಕೇಪು ಸುಂದರ ಮಾಸ್ತರ್, ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಕಣಜಾಲು, ಉಪಾಧ್ಯಕ್ಷರಾಗಿ ಶ್ರೀಧರ ಕುತ್ಯಾಳ, ಕಾರ್ಯದರ್ಶಿಯಾಗಿ ವಾಸುದೇವ ಪೆರುಂಬಾರು, ಖಜಾಂಜಿಯಾಗಿ ದಾಮೋದರ ಗೌಡ ಕೋಡ್ತಿಲು ಅವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಬ್ರಹ್ಮಕಲಶೋತ್ಸವದ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.









ಶ್ರೀ ದುರ್ಗಾದೇವಿ ಅಮ್ಮನವರ ವಿಗ್ರಹ ಹಾಗೂ ದೇವರ ಪ್ರಭಾವಳಿ ನಿರ್ಮಾಣಕ್ಕೆ ಜಾಲ್ಸೂರಿನ ವಿಮಲೇಶ್ ಜುವೆಲ್ಲರಿ ಮಾಲಕರಾದ ಗೋಪಾಲ ಶೇಟ್ ಅವರಿಗೆ ವೀಳ್ಯ ನೀಡಲಾಯಿತು.









