ಸಂವಿಧಾನವು ನೀಡಿರುವ ಹಕ್ಕುಗಳ ಅರಿವು,ರಕ್ಷಣೆ ಮತ್ತು ಪಾಲನೆ ಎಲ್ಲರ ಕರ್ತವ್ಯ:ನ್ಯಾಯಾಧೀಶ ಬಿ.ಮೋಹನ್ ಬಾಬು

0

ಸಂವಿಧಾನವು ಮನುಷ್ಯರಿಗೆ ಹುಟ್ಟಿನಿಂದ ಸಾವಿನವರೆಗೆ ನಾನಾ ರೀತಿಯ ಹಕ್ಕುಗಳನ್ನು ನೀಡಿದೆ. ಅವುಗಳ ಬಗ್ಗೆ ಅರಿತುಕೊಳ್ಳುವುದು ಅದರ ರಕ್ಷಣೆ ಮತ್ತು ಪಾಲನೆ ಎಲ್ಲರ ಕರ್ತವ್ಯವಾಗಿದೆ ಎಂದು ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಬಿ ಮೋಹನ್ ಬಾಬು ರವರು ‘ಮಾನವ ಹಕ್ಕುಗಳ ದಿನಾಚರಣೆಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದಾರೆ.

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ,ಸುಳ್ಯ ವಕೀಲರ ಸಂಘ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದರ ಸಂಯುಕ್ತಾಶ್ರಯದಲ್ಲಿ ಡಿ 15 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಸಂವಿಧಾನವು ಮನುಷ್ಯರಿಗೆ ಹಲವಾರು ಮೂಲಭೂತ ಹಕ್ಕುಗಳನ್ನು ನೀಡಿದ್ದು ಅದರಲ್ಲಿ ಶಿಕ್ಷಣದ ಹಕ್ಕು,ಆರೋಗ್ಯದ ಹಕ್ಕು, ಸಮಾಜದಲ್ಲಿ ವಾಸಿಸುವ ಹಕ್ಕು, ಆಹಾರದ ಹಕ್ಕು ಮುಂತಾದವುಗಳು ಅತಿ ಮುಖ್ಯವಾಗಿದೆ. ಯಾವುದೇ ಸಂದರ್ಭದಲ್ಲಿ ಈ ಹಕ್ಕುಗಳ ಉಲ್ಲಂಘನೆ ಆದಾಗ ಕಾನೂನಿನಿಂದ ಆತನಿಗೆ ಅವುಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ, ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ ಆರ್,ಕಾಲೇಜಿನ ಐಕ್ಯೂ ಎ ಸಿ ಸಂಚಾಲಕರು ಡಾ. ಜಯಶ್ರೀ ಕೆ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಗಾಂಧಿನಗರ ಕೆ ಪಿ ಎಸ್ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಸಮಾದ್ ಮಾತನಾಡಿ ಮಾನವ ಹಕ್ಕುಗಳ ದಿನದ ಕುರಿತು ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಕೆಲವು ಸಂದರ್ಭಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದರ ಕುರಿತು ಮಾತನಾಡಿದ ಅವರು ಇದರಿಂದ ಜನರು ಹೊರಬಂದು ಉತ್ತಮ ನಾಗರಿಕ ಸಮಾಜದ ರಚನೆ ಮಾಡಲು ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕೆಂಬ ವಿಷಯದ ಕುರಿತು ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.


ಕಾಲೇಜಿನ ವಿದ್ಯಾರ್ಥಿನಿಗಳಾದ ಅಶ್ವಿತಾ ಸ್ವಾಗತಿಸಿ ಲಿಖಿತ ಪಿ ಜೆ ವಂದಿಸಿ ನವ್ಯಶ್ರೀ ಪಿ ಆರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು,ವಕೀಲರುಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.