ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಭಜನಾ ರಂಗಪೂಜೆ

0

ಪುರಾಣ ಪ್ರಸಿದ್ಧ ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಧನುಮಾಸದಲ್ಲಿ ನಡೆಯುವ ಧನುಪೂಜೆ ಪ್ರಾರಂಭದ ಮುಂದಿನ ದಿನವಾದ ಡಿ.16ರಂದು ಸುಳ್ಯ ತಾಲೂಕಿನ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯುತ್ತಿದೆ.

ಶ್ರೀ‌ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ನಾಳೆಯಿಂದ ಜ.14ರ ಮಕರ ಸಂಕ್ರಮಣದವರೆಗೆ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಧನುಪೂಜೆಯು ನಡೆಯಲಿದೆ.‌

ಬೆಳಿಗ್ಗೆ ಶ್ರೀ ದೇವರಿಗೆ ಮಹಾಪೂಜೆಯ ಬಳಿಕ ದೀಪಪ್ರತಿಷ್ಠೆಯಾಗಿ ಭಜನಾ ಸೇವೆ ನಡೆಯುತ್ತಿದ್ದು , ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆಯಿತು.
ರಾತ್ರಿ ಮಹಾಪೂಜೆಯ ಬಳಿಕ ಭಜನಾ ಸೇವೆ ಕೊನೆಗೊಳ್ಳಲಿದೆ.