ಅರಂತೋಡು: ತೆಕ್ಕಿಲ್ ಹೆಚ್.ಪಿ. ಗ್ರಾಮೀಣ ಗ್ಯಾಸ್ ವತಿಯಿಂದ ಉಚಿತ ಗ್ಯಾಸ್ ಸಂಪರ್ಕ ವಿತರಣಾ ಸಮಾರಂಭ

0

ಅರಂತೋಡಿನ ತೆಕ್ಕಿಲ್ ಹೆಚ್.ಪಿ. ಗ್ರಾಮೀಣ ಗ್ಯಾಸ್ ವಿತರಕ ಸಂಸ್ಥೆಯ ವತಿಯಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಆಯ್ಕೆಯಾದ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣಾ ಸಮಾರಂಭವು ಅರಂತೋಡು -ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿರಿಸೌಧ ಸಭಾಂಗಣದಲ್ಲಿ ಡಿ.19ರಂದು ಜರುಗಿತು.

ಶಾಸಕಿ ಭಾಗೀರಥಿ ಮುರುಳ್ಯ ಅವರು ಉಚಿತ ಗ್ಯಾಸ್ ಸಂಪರ್ಕ ವಿತರಣೆಗೆ ಚಾಲನೆ ನೀಡಿ ಶುಭಹಾರೈಸಿದರು. ತೆಕ್ಕಿಲ್ ಹೆಚ್.ಪಿ. ಗ್ರಾಮೀಣ ಗ್ಯಾಸ್ ಮಾಲಕರಾದ ಟಿ.ಎಂ. ಶಹೀದ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಒಟ್ಟು 126 ಮಂದಿ ಫಲಾನುಭವಿಗಳು ಉಚಿತ ಗ್ಯಾಸ್ ಸಂಪರ್ಕಕ್ಕೆ ಆಯ್ಕೆಯಾಗಿದ್ದು, ಇದರಲ್ಲಿ ಒಟ್ಟು ಐದು ಮಂದಿ ಫಲಾನುಭವಿಗಳಿಗೆ ಶಾಸಕರು ಗ್ಯಾಸ್ ವಿತರಿಸಿದರು. ತೆಕ್ಕಿಲ್ ಹೆಚ್.ಪಿ. ಗ್ಯಾಸ್ ಸಿಬ್ಬಂದಿ ಧನರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ನ.ಪಂ. ಮುಖ್ಯಾಧಿಕಾರಿ ಸುಧಾಕರ್, ಅರಂತೋಡು ಗ್ರಾ.ಪಂ. ಅದ್ಯಕ್ಷ ಕೇಶವ ಅಡ್ತಲೆ, ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ‌ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ, ಚೆಂಬು ಗ್ರಾ.ಪಂ. ಅಧ್ಯಕ್ಷ ತೀರ್ಥರಾಮ, ಅರಂತೋಡು ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಭವಾನಿ ಚಿಟ್ಟನ್ನೂರು, ಸಂಪಾಜೆ ಗ್ರಾ.ಪಂ. ಉಪಾಧ್ಯಕ್ಷ ಎಸ್.ಕೆ. ಹನೀಫ್ ಕಲ್ಲುಗುಂಡಿ, ಅರಂತೋಡು – ತೊಡಿಕಾನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ಅರಂತೋಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ‌.ಕೆ. ಹಮೀದ್, ಸಿದ್ಧೀಕ್ ಕೊಕ್ಕೋ, ಸುಳ್ಯ ನ.ಪಂ. ಸದಸ್ಯರುಗಳಾದ ರಿಯಾಜ್ ಕಟ್ಟೆಕ್ಕಾರ್, ಶರೀಫ್ ಕಂಠಿ ಉಪಸ್ಥಿತರಿದ್ದರು. ಅಶ್ರಫ್ ಗುಂಡಿ ಸ್ವಾಗತಿಸಿ, ವಂದಿಸಿದರು.