ನಿಂತಿಕಲ್ಲು: ಕೆ.ಎಸ್ ಗೌಡ ಸಮೂಹ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕೋತ್ಸವ “ವರ್ಷ ವೈಭವ”

0

ನಿಂತಿಕಲ್ಲಿನ ಕೆ.ಎಸ್ ಗೌಡ ಸಮೂಹ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ವರ್ಷ ವೈಭವ ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮ ಡಿ‌. 16ರಂದು ನಿಂತಿಕಲ್ಲಿನ ಸಮೂಹ ವಿದ್ಯಾ ಸಂಸ್ಥೆಗಳ ವಠಾರದಲ್ಲಿ ನಡೆಯಿತು.

ಅಲೆಕ್ಕಾಡಿ ಪ್ರಾ.ಕೃ.ಪ. ಸ. ಸಂಘದ ಅಧ್ಯಕ್ಷೆ ಶ್ರೀಮತಿ ಕೆ.ಜಿ ಕುಸುಮಾವತಿ ರೈ ಗುತ್ತು ಧ್ವಜಾರೋಹಣ ಗೈಯ್ದು ಸಮಾರಂಭಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್ ಗೌಡ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸರಕಾರಿ ಪದವಿಪೂರ್ವ ಕಾಲೇಜು ಗಾಂಧಿನಗರ ಸುಳ್ಯ ಇದರ ಪ್ರಾಚಾರ್ಯರಾದ ಅಬ್ದುಲ್ ಸಮದ್ ರವರು ಮಾತನಾಡಿ, ಯುವಜನರು ಗೊಂದಲಗಳಿಂದ ಹೊರಬಂದು ಗುರಿಯೆಡೆಗೆ ನಡೆಯಬೇಕು, ಹಿಂಸೆ, ಆಮಿಷಗಳಿಗೆ ಒಳಗಾಗದೆ ಜೀವನ ರೂಪಿಸಿಕೊಳ್ಳಬೇಕು ಎಂದರು. ಮತ್ತೋರ್ವ ಮುಖ್ಯ ಅತಿಥಿ ಮಹೇಶ್ ಕುಮಾರ್ ಕರಿಕ್ಕಳ ಶುಭ ಹಾರೈಸಿದರು. ನಂತರ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯರಿಗೆ ಸಂಸ್ಥೆಯ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಶಾಸಕಿಯವರು ನಿಂತಿಕಲ್ಲಿನ ಬೆಳವಣಿಗೆಯಲ್ಲಿ ಕೆ.ಎಸ್ ಗೌಡ ವಿದ್ಯಾ ಸಂಸ್ಥೆಗಳ ಕೊಡುಗೆಯನ್ನು ಶ್ಲಾಘಿಸಿ, ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಮತ್ತು ಹೆತ್ತವರ ಕರ್ತವ್ಯಗಳ ಬಗ್ಗೆ ಮಾತನಾಡಿದರು.

ಭಾರತೀಯ ಸೇನೆಯಲ್ಲಿ, ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮಡಿಕೇರಿಯ ವಸಂತ ಟಿ.ಕೆ ಯವರನ್ನು ಸನ್ಮಾನಿಸಲಾಯಿತು. ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.


ವೈಯಕ್ತಿಕ ಚಾಂಪಿಯನ್, ತಂಡ ಪ್ರಶಸ್ತಿ ಮತ್ತು ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪದವಿ ಪೂರ್ವ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಸಿದರು. ಸಮೂಹ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಕುಮಾರಸ್ವಾಮಿ ಕೆ.ಎಸ್ ಪ್ರಾಸ್ತಾವಿಕವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಸದಾನಂದ ರೈ ಕೂವೆಂಜ, ಸುಧೀರ್ ಎಂ.ವಿ ಮತ್ತು ಉಮೇಶ್ ಗೌಡ ಎಚ್ ವರದಿಗಳನ್ನು ವಾಚಿಸಿದರು. ಸಮೂಹ ವಿದ್ಯಾ ಸಂಸ್ಥೆಗಳ ಶಿಕ್ಷಕ ರಕ್ಷಕ ಸಂಘಗಳ ಅಧ್ಯಕ್ಷ ಚಿದಾನಂದ ಕಲ್ಲೇರಿ, ಕೃಷ್ಣಪ್ರಸಾದ್, ವೆಂಕಟ್ರಮಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಜಿತ್ ಐವರ್ನಾಡು, ವಿದ್ಯಾರ್ಥಿ ನಾಯಕರಾದ ಧನುಷ್, ಸ್ರುಜನ್ ಎಂ ಮತ್ತು ರಮಿತ್ ರೈ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಸಮೂಹ ವಿದ್ಯಾಸಂಸ್ಥೆಗಳ ಕಾರ್ಯಕ್ರಮಾಧಿಕಾರಿ ಪ್ರಸನ್ನ ವೈ.ಟಿ ವಂದಿಸಿದರು.


ಭೌತಶಾಸ್ತ್ರ ಉಪನ್ಯಾಸಕರಾದ ಉಜ್ವಲ್ ಕೆ.ಎಚ್ ಹಾಗೂ ಶಿಕ್ಷಕಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ನಂತರ ಸಂಸ್ಥೆಯ ಶಿಕ್ಷಕ ವರ್ಗ ಮತ್ತು ಉಪನ್ಯಾಸಕ ವರ್ಗದವರಿಂದಲೇ ನಿರ್ದೇಶಿಸಲ್ಪಟ್ಟ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಗಳ ವಿದ್ಯಾರ್ಥಿಗಳಿಂದ ನ್ರತ್ಯ, ರೂಪಕ, ಮೈಮ್ ಶೋ ಯೋಗಾಸನ ಕರಾಟೆ, ನಾಟಕಗಳನ್ನೊಳಗೊಂಡ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳನ್ನೊಳಗೊಂಡ ಸಿಂಗಾರಿ ಮೇಳ ಬಾಳಿಲ ಇವರ ಚೆಂಡೆ ವಾದನ ನಡೆಯಿತು. ಸಂಸ್ಥೆಯ ವತಿಯಿಂದ ಡಿ. 15 16ರಂದು ಭೋಜನ ಮತ್ತು 16 ರಂದು ಸಂಜೆ ಉಪಹಾರ ವ್ಯವಸ್ಥೆಯನ್ನು ಐ.ಟಿ.ಐ ಯ ಉಪನ್ಯಾಸಕರಾದ ಶ್ರೀಧರ್ ಅವರ ನೇತೃತ್ವದಲ್ಲಿ ಮಾಡಲಾಗಿತ್ತು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಹಂಸ ಕೆ‌.ಜಿ 10ನೇತರಗತಿ ಮತ್ತು ಭವಿಷ್ಯ ಪಿ 10 ನೇ ತರಗತಿ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯರಾದ ಶ್ರೀಮತಿ ಜಯಶ್ರೀ ಪಿ.ವಿ, ಶ್ರೀಮತಿ ಧನ್ಯ ಕೆ.ವಿ, ಹಾಗೂ ಕುಮಾರಿ ಜ್ಯೋತ್ಸ್ನಾ ಪಿ.ಜೆ ನಿರೂಪಿಸಿದರು. ಜೀವಶಾಸ್ತ್ರ ಉಪನ್ಯಾಸಕರಾದ ಜೀವನ್ ಎಸ್.ಎಚ್ ತಾಂತ್ರಿಕ ಸಹಾಯವನ್ನು ನೀಡಿದರು. ಪ್ರಶಸ್ತಿ ಪುರಸ್ಕ್ರತ ಮತ್ತು ವಿಶೇಷ ಸಾಧನೆಗೈದ ಸಾಧಕ ವಿದ್ಯಾರ್ಥಿಗಳ ವಿವರವನ್ನು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಜ್ಯೋತ್ಸ್ನಾ, ಐಟಿಐ ಕಾಲೇಜಿನ ಉಪನ್ಯಾಸಕ ಶೇಖರ್ ಗೌಡ, ಶಿಕ್ಷಕಿಯರಾದ ವೇದಾವತಿ ಎಸ್ ಮತ್ತು ಪ್ರಜ್ಞಾ ನೀಡಿದರು.