ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಾರ್ಷಿಕೋತ್ಸವ

0

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಾರ್ಷಿಕೋತ್ಸವ ಡಿ. 23ರಂದು ನಡೆಯಿತು. ಅಪರಾಹ್ನ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದರ‌ ಅಧ್ಯಕ್ಷತೆಯಲ್ಲಿ ಸಭಾ‌ಕಾರ್ಯಕ್ರಮ ನಡೆಯಿತು. ಕರ್ನಾಟಕ ಸರಕಾರದ ಯೂತ್ ಎನ್ ಪವರ್ ಮೆಂಟ್ & ಸ್ಪೋರ್ಟ್ಸ್ ಕಮಿಷನರ್ ಎನ್. ಶಶಿಕುಮಾರ್ ಐಪಿಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಡೀನ್ ಫೆಕಾಲ್ಟಿ ಡಾ. ಪ್ರಶಾಂತ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ನಿರ್ದೇಶಕರುಗಳಾದ ಜಗದೀಶ್ ಅಡ್ತಲೆ, ಧನಂಜಯ ಮದುವೆಗದ್ದೆ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀಜ ರೈ, ಮಹಿಳಾ ಪ್ರತಿನಿಧಿ ಸ್ನೇಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ.ವಿ. ಲೀಲಾಧರ್ ಕಾಲೇಜಿನ ವರದಿ ವಾಚಿಸಿದರು. ಕಾಲೇಜು ಮ್ಯಾಗಷಿನ್ ‘ಪ್ರಜ್ಞಾ’ ವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಸಂಚಿಕೆಯ ಸಂಪಾದಕರಾದ ಡಾ. ಹರ್ಷವರ್ಧನ್ ಮ್ಯಾಗಜಿನ್ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತಾ ಪುರುಷೋತ್ತಮ್ ಕೆ.ವಿ.ಜಿ ಚಿನ್ನದಪದಕ ವಿಜೇತರ ಪಟ್ಟಿ ವಾಚಿಸಿದರು. ಡಾ. ವಿನಯ್ ಭಾರದ್ವಾಜ್ ಶಶಿಕುಮಾರ್ ರನ್ನು ಪರಿಚಯಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಅವರ ಹೆಸರನ್ನು ಡಾ. ಶಬೀನಾ ಟಿ.ಟಿ. ವಾಚಿಸಿದರು. ಡಾ. ಗೋಪಾಲಕೃಷ್ಣ ರಿಸರ್ಚ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕೆ.ವಿ.ಜಿ‌. ಆಯುರ್ವೇದ ಫಾರ್ಮಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪುರುಷೋತ್ತಮರ ನೇತೃತ್ವದಲ್ಲಿ ತಯಾರಿಸಿದ ನೂತನ ಆಯುರ್ವೇದಿಕ್ ಉತ್ಪನ್ನಗಳನ್ನು ಈ ಸಂದರ್ಭದಲ್ಲಿ ಬಿಡುಗಡೆಮಾಡಲಾಯಿತು.

ಡಾ. ಲಕ್ಷ್ಮೀಶ್ ನಿವೃತ್ತ ಸಿಬ್ಬಂದಿಗಳ ಮತ್ತು ಹಿರಿಯ ಸಿಬ್ಬಂದಿಗಳ ಹೆಸರು ವಾಚಿಸಿದರು. ಡಾ. ಸನತ್ ಕುಮಾರ್ ಕ್ರೀಡಾ ಕ್ಷೇತ್ರದ ಸಾಧಕರ ಹೆಸರು ವಾಚಿಸಿದರು. ಡಾ. ದೀಪ್ತಿ ಅತಿಥಿ ಡಾ. ಪ್ರಶಾಂತ್ ಎ.ಎಸ್ ರನ್ನು ಪರಿಚಯಿಸಿದರು.
ಕು. ದೀಕ್ಷಾ ಡಿ.ಪಿ ಮತ್ತು ಕು. ಕೃತಿಕಾ ಕಾರ್ಯಕ್ರಮ ನಿರೂಪಿಸಿದರು. ಕು. ಗೌರಿಭಾರತಿ ಮತ್ತು ಸೂರ್ಯಪ್ರಜ್ಞಾ ಪ್ರಾರ್ಥಿಸಿದರು. ಪಿ.ಪಿ. ಪ್ರತಿನಿಧಿ ಡಾ. ಓಂ ಈರಪ್ಪ ಎಳಿಗಾರ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್ಥಿಕ್ ಕೆ.ಎಸ್ ವಂದಿಸಿದರು.

ಮಾನವೀಯತೆಗಿಂತ ದೊಡ್ಡ ಕೊಡುಗೆ ಬೇರೆ ಇಲ್ಲ. ನಾವು ಇತರರನ್ನು ಗೌರವಿಸದರೆ ಸಮಾಜ ನಮ್ಮನ್ನು ಗೌರವಿಸುತ್ತದೆ. ಇಲ್ಲಿಯ ವಿದ್ಯಾರ್ಥಿಗಳು ಪಡೆದಿರುವ ರ್ಯಾಂಕ್, ಚಿನ್ನದ ಪದಕಗಳನ್ನು ನೋಡುವಾಗ ಈ ಸಂಸ್ಥೆಯಲ್ಲಿ ನೀಡುತ್ತಿರುವ ಶಿಕ್ಷಣದ ಗುಣಮಟ್ಟ ತಿಳಿಯುತ್ತದೆ – ಶಶಿಕುಮಾರ್ ಐಪಿಎಸ್

ಗ್ರಾಮೀಣ ಪ್ರದೇಶವಾದ ಸುಳ್ಯದ ಜನತೆಗೆ ಆಯುರ್ವೇದದ ಎಲ್ಲಾ ರೀತಿಯ ಪ್ರಯೋಜನಗಳು ದೊರೆಯಬೇಕೆನ್ನುವ ಉದ್ದೇಶವನ್ನು ಹೊಂದಿಕೊಂಡು ಸೋಣಂಗೇರಿಯಂತ ಗ್ರಾಮೀಣ ಪ್ರದೇಶದಲ್ಲಿ ಆಯುರ್ವೇದ ಚಿಕಿತ್ಸಾ ಕೇಂದ್ರವನ್ನು ತೆರೆಯಲಿದ್ದೇವೆ. ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸುತ್ತೇನೆ – ಡಾ. ಕೆ.ವಿ. ಚಿದಾನಂದ