ಎರಡನೇ ಬಾರಿ ಬಹುಮತದಿಂದ ಆಯ್ಕೆ
ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಎ.ಒ.ಎಲ್.ಇ ಕಮಿಟಿ ಬಿ ಅಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಎರಡು ಅವಧಿಗೆ ಅವಿರೋಧವಾಗಿ ಮತ್ತು ಮೂರನೇ ಅವಧಿಗೆ ಬಹುಮತದಿಂದ ಚುನಾಯಿತರಾಗಿದ್ದ ಡಾ. ರೇಣುಕಾಪ್ರಸಾದ್ ಕೆ.ವಿ.ಯವರು ಹೊಸ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೀಗ ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆಯಲ್ಲಿ ಡಾ. ರೇಣುಕಾಪ್ರಸಾದ್ ಕೆ.ವಿ. ಯವರು 2ನೇ ಬಾರಿಗೆ 21-14 ಮತಗಳ ಅಂತರದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಕೆಂಚಪ್ಪ ಗೌಡ, ಕಾರ್ಯದರ್ಶಿಯಾಗಿ ಕೋನಪ್ಪ ರೆಡ್ಡಿ ಮತ್ತು ಜೊತೆ ಕಾರ್ಯದರ್ಶಿಯಾಗಿ ಹನುಮಂತರಾಯಪ್ಪ ಆಯ್ಕೆಯಾಗಿದ್ದಾರೆ.