ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಆರ್ಟ್ಸ್ ಪುತ್ತೂರು ಇವರು ಆಯೋಜಿಸಿದ ೪೨ನೇ ಬಿಸಿಐ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ – ೨೦೨೪ ರಲ್ಲಿ ಭಾಗವಹಿಸಿದ ತುಷಾರ್ ಬಿ. ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ಶ್ರೀ ರಾಮ ಶಾಲೆ ಉಪ್ಪಿನಂಗಡಿ ಇಲ್ಲಿಯ ೫ನೇ ತರಗತಿ ವಿದ್ಯಾರ್ಥಿಯಾಗಿದ್ದು, ರಾಮಕುಂಜ ಗ್ರಾಮದ ರಾಜೇಶ್ ಮತ್ತು ಅರ್ಚನಾ ದಂಪತಿಗಳ ಪುತ್ರ. ಮಂಡೆಕೋಲು ಗ್ರಾಮದ ಬೊಳುಗಲ್ಲು ಪುಷ್ಪಾವತಿ ಮತ್ತು ಶಿವರಾಮ ದಂಪತಿಗಳ ಮೊಮ್ಮಗ. ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಇವರ ಶಿಷ್ಯ.