ಹೋಟೆಲ್ ಮಧುವನ ನೂತನ ಆಡಳಿತ ದೊಂದಿಗೆ ಶುಭಾರಂಭ

0

ಸುಳ್ಯ ತಾಲೂಕು ಕಚೇರಿ ಯ ಮುಂಭಾಗದಲ್ಲಿ ಕೆ.ವಿ.ಜಿ ಜಂಕ್ಷನ್ ಬಳಿ ಕಳೆದ 26 ವರ್ಷಗಳಿಂದ ವ್ಯವಹರಿಸುತ್ತಿರುವ ನಾಯರ್ ಸಹೋದರರ‌ ಪಾಲುದಾರಿಕೆಯ ಹೋಟೆಲ್ ಮಧುವನವು ನೂತನಆಡಳಿತದೊಂದಿಗೆ ಶ್ರೀಮತಿ ನಿಶ್ಮಿತಾ ರವೀಂದ್ರ ರವರ ಮಾಲಕತ್ವದಲ್ಲಿ
ಡಿ.16 ರಂದು ಶುಭಾರಂಭಗೊಂಡಿತು.

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈಯವರು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಸ್ವಾಗತ್ ಐಸ್ ಕ್ರೀಮ್ ಮಾಲಕ ಪ್ರಭಾಕರನ್ ನಾಯರ್,
ನಂದಾ ಸ್ಟೋರ್ಸ್ ಮಾಲಕ ಶಿವಾನಂದ ಕುರುಂಜಿ, ಜಯಶ್ರೀ ಜೆರಾಕ್ಸ್ ಮಾಲಕ ಮಾಧವ ಗೌಡ, ಹಿರಿಯರಾದ ಪದ್ಮನಾಭ ನಾಯರ್ ಅರಂಬೂರು, ವಿಶ್ವನಾಥ ನಾಯರ್ ಅರಂಬೂರು, ಭಾಸ್ಕರ ನಾಯರ್, ಪ್ರಭಾಕರ ನಾಯರ್, ವರ್ತಕರ ಸಂಘದ ನಿರ್ದೇಶಕ ಅಬ್ದುಲ್ ರಹಿಮಾನ್, ಶ್ರೀಮತಿ ವೀಣಾ ಪ್ರಭಾಕರ ನಾಯರ್ ಮತ್ತಿತರರು ಉಪಸ್ಥಿತರಿದ್ದರು.
ಭಾಸ್ಕರ ನಾಯರ್ ಸ್ವಾಗತಿಸಿ, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ವಂದಿಸಿದರು. ಹೋಟೆಲ್ ಸಿಬ್ಬಂದಿ ವರ್ಗದವರು ಸಹಕರಿಸಿದರು.