“ಚೈತನ್ಯ ಶ್ರೀ- 2024” ಮಹಿಳಾ ಸಾಧಕಿ ಪ್ರಶಸ್ತಿಗೆ ಡಾ. ಅನುರಾಧಾ ಕುರುಂಜಿ ಆಯ್ಕೆ

0

ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ

ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದು ಪ್ರವೃತ್ತಿಯಲ್ಲಿ
ತರಬೇತುದಾರಳು, ಸಂಘಟಕಿ ಹಾಗೂ
ಬರಹಗಾರ್ತಿಯಾಗಿರುವ ಬಹುಮುಖ ಪ್ರತಿಭೆ ಸುಳ್ಯದ ಡಾ.
ಅನುರಾಧಾ ಕುರುಂಜಿಯವರು
ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತುನವರು
ಅತ್ಯುತ್ತಮ ಸಾಧನೆಗೈದ ಮಹಿಳೆಯರಿಗೆ ಪ್ರಪ್ರಥಮ ಬಾರಿಗೆ ಕೊಡ ಮಾಡಿದ ರಾಜ್ಯಮಟ್ಟದ “ಪ್ರತಿಷ್ಠಿತ “ಚೈತನ್ಯ ಶ್ರೀ- 2024” ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

ಎನ್ ಎಸ್ ಎಸ್, ಸ್ಕೌಟ್- ಗೈಡ್, ಜೇಸೀಸ್, ರೆಡ್ ಕ್ರಾಸ್, ಮೊದಲಾದ ಸಂಸ್ಥೆಗಳಲ್ಲಿ ಹಲವು ಪ್ರಥಮಗಳೊಂದಿಗೆ ಕೆಲವು ಶಾಶ್ವತ ದಾಖಲೆಗಳನ್ನು ನಿರ್ಮಿಸಿರುವ ಡಾ. ಅನುರಾಧಾ ಕುರುಂಜಿಯವರು ಶಿಕ್ಷಣದ ಜೊತೆಗೆ ಓರ್ವ ವ್ಯಕ್ತಿತ್ವ ವಿಕಸನ ತರಬೇತುದಾರಳಾಗಿ 2500 ಕ್ಕೂ ಮಿಕ್ಕಿ ತರಬೇತಿಗಳನ್ನು. ನೀಡಿ ಸಾವಿರಾರು ವಿದ್ಯಾರ್ಥಿಗಳ, ಯುವಜನತೆಯ , ಸಮಾಜ ಬಾಂಧವರ ವ್ಯಕ್ತಿತ್ವ ವಿಕಸನಕ್ಕೆ ಕಾರಣಕರ್ತರಾದ ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಯಲಹಂಕದ ವಿ ಜೆ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ಇದೇ ಡಿ. 28 ಮತ್ತು 29 ರಂದು ನಡೆಯಲಿರುವ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉದ್ಘಾಟಿಸಲಿರುವ,, ರಂಗಕರ್ಮಿ, ಚಲನಾ ಚಿತ್ರ ನಟಿ ಉಮಾಶ್ರೀ ಸರ್ವಾಧ್ಯಕ್ಷರಾಗಿರುವ ರಾಜ್ಯ ಮಟ್ಟದ ನಾಲ್ಕನೇ ಬೃಹತ್ ವೈಜ್ಞಾನಿಕ ಸಮ್ಮೇಳನದಲ್ಲಿ, ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ಈ ಹಿಂದೆ ಹಲವು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಭಾಜನವಾಗಿರುವ ಡಾ ಅನುರಾಧಾ ಕುರುಂಜಿಯವರು ಕುರುಂಜಿಯ ಪದ್ಮಯ್ಯ ಗೌಡ, ಸೀತಮ್ಮ ದಂಪತಿಗಳ ಪುತ್ರಿ ಹಾಗೂ ಕೆವಿಜಿ ಪಾಲಿಟೆತ್ನಿಕ್ ನ ಶಿಕ್ಷಕ ಚಂದ್ರಶೇಖರ ಬಿಳಿನೆಲೆಯವರ ಪತ್ನಿ

ಇದೇ ಸಂದರ್ಭದಲ್ಲಿ ದ.ಕ ಜಿಲ್ಲೆಯಿಂದ ಡಾ. ಮೋಹನ್ ಆಳ್ವರು ಜೀವಮಾನ ಸಾಧಕ ಪ್ರಶಸ್ತಿಯನ್ನು ಸ್ವೀಕರಿಸಲಿದ್ದು, “ಮೋಹನ್ ಆಳ್ವರಂತಹ ಮಹಾನ್ ಚೇತನ, ಶಿಕ್ಷಣ ಕ್ಷೇತ್ರದ ಗಾರುಡಿಗರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸುವುದು ಹೆಮ್ಮೆಯ ಸಂಗತಿ” ಎನ್ನುತ್ತಾರೆ. ಡಾ. ಅನುರಾಧಾ ಕುರುಂಜಿಯವರು.