ಪಂಜ :ಜೇಸಿ ಸಪ್ತಾಹ-2023

0


⬆️ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಾಗಾರ


⬆️ಡಿ.24.: ಕ್ರೀಡೋತ್ಸವ


⬆️ಡಿ.25: ಸಮಾರೋಪ

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ 2023ರ ನಾಲ್ಕನೇ ದಿವಸದ ಕಾರ್ಯಕ್ರಮ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಗಾರ ಪದವಿಪೂರ್ವ ಕಾಲೇಜುಗಳ ಆಯ್ದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮವು ಡಿ. 23 ರಂದು ನಿಂತಿಕಲ್ಲು ಕೆ.ಎಸ್.ಗೌಡ ಸಮೂಹ ವಿದ್ಯಾಸಂಸ್ಥೆಯಲ್ಲಿ
ನಡೆಯಿತು.

ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಮುರಳಿಶ್ಯಾಮ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ವಹಿಸಿದ್ದರು.

ಅತಿಥಿಯಾಗಿ ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಭಾರ ಪ್ರಾಂಶುಪಾಲ ಸುಧೀರ್ ಯಮ್.ವಿ., ತರಬೇತುದಾರರಾಗಿ ವಲಯ ತರಬೇತುದಾರರಾದ ಸವಿತಾರ ಮುಡೂರು , ಸೋಮಶೇಖರ ನೇರಳ ಹಾಗೂ ಘಟಕದ ನಿಕಟ ಪೂರ್ವಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು , ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ , ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ಕಾರ್ಯದರ್ಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುನೀತ್ ಮೂಲೆಮನೆ ವೇದಿಕೆಗೆ ಆಹ್ವಾನಿಸಿದರು. ಪ್ರವೀಣ್ ಕುಂಜತ್ತಾಡಿ ಜೇಸಿ ವಾಣಿ ವಾಚಿಸಿದರು.ಅತಿಥಿಗಳನ್ನು ಅಶೋಕ ಕುಮಾರ್ ದಿಡುಪೆ, ಪ್ರಸನ್ನ ವೈ.ಟಿ, ಚರಣ್ ದೇರಪ್ಪಜ್ಜನಮನೆ ಪರಿಚಯಿಸಿದರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೇಸಿ ವಾಚಣ್ಣ ಕೆರೆಮೂಲೆ ವಂದಿಸಿದರು.ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರುಗಳು,ಸದಸ್ಯರುಗಳು ಹಾಗೂ ಜೇಸಿ ಸದಸ್ಯರು ಉಪಸ್ಥಿತರಿದ್ದರು.

ಡಿ.25 ರ ತನಕ ಸಪ್ತಾಹ:

ಡಿ.24 ರಂದು ಬೆಳಿಗ್ಗೆ ಗಂಟೆ 10 ರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕ್ರೀಡೋತ್ಸವ ಜರುಗಲಿದೆ.550 ಕೆ.ಜಿ. 8 ಜನರ ಲೆವೆಲ್ ಮಾದರಿಯ ಪುರುಷರ ಹಗ್ಗಜಗ್ಗಾಟ ಜೇಸಿ ಟ್ರೋಫಿ -2023
ಪ್ರಥಮ ರೂ.15023 , ದ್ವಿತೀಯ ರೂ.10023, ತೃತೀಯ ಮತ್ತು ಚತುರ್ಥ ತಲಾ ರೂ.3023 ನಗದು ಬಹುಮಾನ ಹಾಗೂ ಜೇಸಿ ಟ್ರೋಫಿ ಇರುತ್ತದೆ.ಕೆಸರು ಗದ್ದೆಯಲ್ಲಿ ಸ್ಥಳೀಯ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಮನೋರಂಜನೆ ಆಟಗಳು, ಆಹ್ವಾನಿತ ತಂಡಗಳ ಕೆಸರು ಗದ್ದೆ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಕ್ರೀಡಾ ಕೂಟವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ.ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯೋಗೀಶ್ ಚಿದ್ಗಲ್ ರವರಿಗೆ ಸನ್ಮಾನ ನಡೆಯಲಿದೆ.

ಡಿ.25 ರಂದು ಸಂಜೆ ಗಂಟೆ 6.30ರಿಂದ ಸಮಾರೋಪ ಸಮಾರಂಭ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಸಹಕಾರಿ ಧುರೀಣ ಜಾಕೆ ಮಾಧವ ಗೌಡ ಪಾಲ್ಗೊಳ್ಳಲಿದ್ದಾರೆ. ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಗುರುಪ್ರಸಾದ್ ತೋಟ ರವರಿಗೆ ಕಮಲ ಪತ್ರ ಪ್ರಶಸ್ತಿ ಪುರಸ್ಕೃರ ನಡೆಯಲಿದ್ದು,ಜೇಸಿಐ ವಲಯ 15 ರ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪುರಸ್ಕೃರಿಸಲಿದ್ದಾರೆ. ಮುಳಬಾಗಿಲು ಕೂತಾಂಡ್ಲಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಲಪತಿ ಕೆ.ವಿ ರವರು ಸನ್ಮಾನ ಸ್ವೀಕರಿಸಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರು -ಚಿಲಿಂಬಿ ಊರ್ವ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿ ಬಳಗ ದವರಿಂದ ಬೊಳ್ಳಿಮಲೆತ ಶಿವಶಕ್ತಿಲು ಎಂಬ ಪೌರಾಣಿಕ ತುಳು ನಾಟಕ ಪ್ರದರ್ಶನ ಗೊಳ್ಳಲಿದೆ.