ಕಲ್ಲುಗುಂಡಿ: ಸ್ಟಾರ್ ಫರ್ನಿಚರ್ ಶುಭಾರಂಭ

0

ಕಲ್ಲುಗುಂಡಿಯ ಮುಖ್ಯರಸ್ತೆಯ ಪಕ್ಕದ ಸಿ.ಟಿ.ಟವರ್ ನಲ್ಲಿ ರೋಹನ್ ಕಲ್ಲುಗುಂಡಿ ಅವರ ಮಾಲಕತ್ವದ ಸ್ಟಾರ್ ಫರ್ನಿಚರ್ ಡಿ.19ರಂದು ಶುಭಾರಂಭಗೊಂಡಿತು.

ಸಂಸ್ಥೆಯನ್ನು ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ, ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು, ಸಂಪಾಜೆ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕಿಶೋರ್ ಅವರು ಜಂಟಿಯಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಟ್ಟಡದ ಮಾಲಕರಾದ ಉಸ್ಮಾನ್ ಕಲ್ಲುಗುಂಡಿ, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇಲ್ಲಿ ಎಲ್ಲಾ ವಿಧದ ಫರ್ನಿಚರ್ ಐಟಂಗಳು ಲಭ್ಯವಿದ್ದು, ಶುಭಾರಂಭದ ಪ್ರಯುಕ್ತ ಮುಂದಿನ ಒಂದು ತಿಂಗಳು ಅವಧಿಗೆ ಎಲ್ಲಾ ವಸ್ತುಗಳ ಖರೀದಿಯ ಮೇಲೆ 35% ರಿಯಾಯಿತಿ ಲಭ್ಯವಿವೆ ಎಂದು ಮಾಲಕರು ತಿಳಿಸಿದ್ದಾರೆ.