ಕಲ್ಲೋಣಿ : ಎರಡು ಆಟೊ ಬೈಕ್ ಡಿಕ್ಕಿ – ಗಂಭೀರ ಗಾಯ

0

ಗುದ್ದಿದ ರಭಸಕ್ಕೆ ಬೈಕ್ ರಿಕ್ಷಾಗಳು ಚರಂಡಿಗೆ – ಸಂಪೂರ್ಣ ಜಖಂ

ಬೆಳ್ಳಾರೆಯ ಕಲ್ಲೋಣಿ ಸಮೀಪ ಎರಡು ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ಡಿ.24 ರಂದು ರಾತ್ರಿ ನಡೆದಿದೆ.


ರಿಕ್ಣಾವನ್ನು ಬೈಕ್ ಸವಾರ ಓವರ್ ಟೇಕ್ ಮಾಡುವಾಗ ಎದುರಿನಿಂದ ಬಂದ ರಿಕ್ಷಾದ ಮಧ್ಯೆ ಸಿಲುಕಿಕೊಂಡು ಅಪಘಾತವಾಗಿದ್ದು ರಿಕ್ಷಾಗಳು ಪರಸ್ಪರ ವಿರುದ್ದ ದಿಕ್ಕಿನಲ್ಲಿ ಚರಂಡಿಗೆ ಬಿದ್ದಿವೆ.
ಬೈಕ್ ಕೂಡ ಚರಂಡಿಗೆ ಬಿದ್ದಿದೆ.


ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿರುವುದಾಗಿ ತಿಳಿದು ಬಂದಿದೆ.
ರಿಕ್ಷಾ ಚಾಲಕರಿಗೂ ಗಾಯವಾಗಿರುವುದಾಗಿ ತಿಳಿದು ಬಂದಿದೆ.ಗುದ್ದಿದ ರಭಸಕ್ಕೆ ಮೂರು ವಾಹನಗಳು ಕೂಡ ದೊಡ್ಡ ಚರಂಡಿಗೆ ಬಿದ್ದಿದ್ದು ಸಂಪೂರ್ಣ ಜಖಂ ಗೊಂಡಿರುವುದಾಗಿ ತಿಳಿದು ಬಂದಿದೆ.