ಸುಳ್ಯ ಸೈಂಟ್ ಜೋಸೆಫ್ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಾರ್ಷಿಕೋತ್ಸವ

0

ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ 5ನೇ ತರಗತಿಯಿಂದ 10ನೇ ತರಗತಿಯ ಶಾಲಾ ವಾರ್ಷಿಕೋತ್ಸವವು ಡಿ.21 ರಂದು ನಡೆಯಿತು.
ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ.ಪಾ ವಿಕ್ಟರ್ ಡಿಸೋಜರವರು ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ಕಾರ್ಯಕ್ರಮದ ಅತಿಥಿಗಳಾಗಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ, ಪೆರಾಜೆ ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷರಾದ ಡಾ. ಎನ್.ಎ.ಜ್ಞಾನೇಶ್ ರವರು ಹಾಗೂ ಗೌರವ ಅತಿಥಿಗಳಾಗಿ
ಸುಳ್ಯ ನಗರ ಪಂಚಾಯತ್ ಸದಸ್ಯ ಡೇವಿಡ್ ದೀರಾ ಕ್ರಾಸ್ತ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ, ಸುಪೀರಿಯರ್, ಅಸ್ಸಿಸಿ ಸದನ್ ಚರ್ಚ್ ಸುಳ್ಯದ ಸಿಸ್ಟರ್ ಸಿಸಿಲಿಯಾ, ಸುಪೀರಿಯರ್, ಸೈಂಟ್ ರೇಮಂಡ್‌ ಕಾನ್ವೆಂಟ್ ಸಿಸ್ಟರ್ ಗ್ರೇಸಿ, ಪ್ರೌಢಶಾಲಾ ಪೋಷಕ ಸಮಿತಿ ಅಧ್ಯಕ್ಷರಾದ ಗುರು ಸ್ವಾಮಿ ಬಿ.ಜಿ. ಪ್ರಾಥಮಿಕ ಪೊಷಕ ಸಮಿತಿ ಅಧ್ಯಕ್ಷರಾದ ಜೆ ಕೆ ರೈ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಹುಲ್ ಜಿ. ದಾಸ್, ಶಾಲಾ ನಾಯಕಿ ಹೈನಾ ತಸ್ನೀನ್ ಮೊದಲಾದವರು ಉಪಸ್ಥಿತರಿದ್ದರು.ಸೈಂಟ್ ಜೋಸೆಫ್ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮರವರು ಹೊಸ ಪ್ರಯೋಗವಾಗಿ ಶಾಲಾ ವಾರ್ಷಿಕ ವರದಿಯನ್ನು ಶಾಲಾ ವಿದ್ಯಾರ್ಥಿಗಳಿಂದ ವಾಚಿಸಿದರು.

ಇದನ್ನು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯವರು ಪ್ರಶಂಸಿದರು. ಶಿಕ್ಷಕಿ ಅನಿತಾ ಮಸ್ಕರೇನಸ್ ವಂದಿಸಿ, ಶಿಕ್ಷಕಿ ಚೇತನ ಸ್ವಾಗತಿಸಿದರು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಂತರ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ವಿನೂತನ ಶೈಲಿಯಲ್ಲಿ ಕರಾರುವಕ್ಕಾಗಿ ಮೂಡಿಬಂದವು.

ಶಾಲಾ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳ ಸಹಕಾರದಿಂದ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿ ಪೋಷಕರಿಂದ ಹಾಗೂ ಶಾಲಾ ಅಭಿಮಾನಿಗಳ ಪ್ರಶಂಸೆಗೆ ಒಳಗಾಯಿತು.