ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿಯ ಅಟೋ ರಿಕ್ಷಾ ನಿಲ್ದಾಣದ ಬಳಿಯ ಖಾಸಗಿ ಕಾಂಪ್ಲೆಕ್ಸ್ ಎದುರಿನಲ್ಲಿ ಕಳೆದ 5- 6 ತಿಂಗಳಿನಿಂದ ಕಾರೊಂದನ್ನು ಪಾರ್ಕ್ ಮಾಡಿ ನಿಲ್ಲಿಸಿದ್ದು ಅನಾಥ ಸ್ಥಿತಿಯಲ್ಲಿ ಇರುವ ಹಾಗೆ ಕಂಡು ಬಂದಿದೆ.
ಅತ್ಯಂತ ಬೆಲೆ ಬಾಳುವ ಹೋಂಡಾ ಕಂಪೆನಿಯ
ಕಾರನ್ನು ಪಾರ್ಕ್ ಮಾಡಿರುವ ತಳ ಭಾಗದಲ್ಲಿ ಹುಲ್ಲು ಬೆಳೆದಿದ್ದು ನಾಲ್ಕು ಚಕ್ರದಲ್ಲಿ ಗಾಳಿ ಇಲ್ಲದೆ ಚಲಾಯಿಸುವ ಸ್ಥಿತಿಯಲ್ಲಿ ಇಲ್ಲವಾಗಿದೆ.
ಕಾರು ಸಂಪೂರ್ಣ ಧೂಳುಮಯವಾಗಿದ್ದು ಮೇಲ್ನೋಟಕ್ಕೆ ರನ್ನಿಂಗ್ ಕಂಡೀಷನ್ ನಲ್ಲಿ ಇಲ್ಲದಂತೆ ತೋರುತ್ತಿದೆ.
ಉಪಯೋಗ ಇಲ್ಲದ ಕಾರನ್ನು ಈ ಜಾಗದಲ್ಲಿ ನಿಲ್ಲಿಸಿರುವುದರಿಂದ ಸಾರ್ವಜನಿಕರು ಕಾಂಪ್ಲೆಕ್ಸ್ ಗಳಿಗೆ ಬರುವ ಗ್ರಾಹಕರಿಗೆ ವಾಹನ ನಿಲ್ಲಿಸಲು ಮತ್ತು ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾಗುತ್ತಿದೆ ಎಂದು ಇಲ್ಲಿನ ವ್ಯಾಪಾರಸ್ಥರು ದೂರಿಕೊಂಡಿದ್ದಾರೆ.
ಖಾಸಗಿ ವಾಹನವನ್ನು ತಿಂಗಳುಗಟ್ಟಲೆ ಸಾರ್ವಜನಿಕ ನಗರ ಪ್ರದೇಶದಲ್ಲಿ ಪಾರ್ಕ್ ಮಾಡುವ ಬದಲಾಗಿ ಗ್ಯಾರೇಜ್ ನಲ್ಲಿ ಅಥವಾ ನಿರ್ಜನ ಪ್ರದೇಶದಲ್ಲಿ ಇಡಬಹುದಿತ್ತು ಎಂದು ಸಾರ್ವಜನಿಕರುಮಾತನಾಡಿಕೊಳ್ಳುತ್ತಿದ್ದಾರೆ.
ಸಂಬಂಧ ಪಟ್ಟ ಕಾರಿನ ವಾರಸುದಾರರು ಅಥವಾ ಇಲಾಖೆಯವರು ಈ ಬಗ್ಗೆ ಗಮನಹರಿಸಬೇಕಾಗಿದೆ.