ಆಲೆಟ್ಟಿ ಗ್ರಾಮದ ನಡುಮನೆ ಕುಟುಂಬದ ಹಿರಿಯರಾದ ವೆಂಕಪ್ಪ ಗೌಡ ರವರು ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಹಾಗೂ ಓರ್ವ ಪುತ್ರ ತೀರ್ಥಕುಮಾರ್, ಪುತ್ರಿಯರಾದ ಹೇಮಾವತಿ, ರೀತಾ ಮತ್ತು ಸಹೋದರ, ಸಹೋದರಿಯರನ್ನು ಹಾಗೂಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಕಳೆದ ಕೆಲ ವರ್ಷಗಳಿಂದ ಸುಳ್ಯದ ಗಾಂಧಿನಗರದಲ್ಲಿ ಗಾಡಿ ವ್ಯಾಪಾರ ನಡೆಸುತ್ತಿದ್ದರು. ಪ್ರಸ್ತುತ ಗಾಂಧಿನಗರ ಶಾಲೆಯ ಬಳಿಯಲ್ಲಿ ವಾಸವಾಗಿದ್ದರು.