ಮುರುಳ್ಯ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ

0

ಮುರುಳ್ಯ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಡಿ.22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಎಸ್. ಡಿ .ಎಂ .ಸಿ ಅಧ್ಯಕ್ಷರಾದ ಅವಿನಾಶ್ ಡಿ .ದೇವರಮಜಲು ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಎಸ್. ಡಿ. ಎಂ. ಸಿ ಉಪಾಧ್ಯಕ್ಷೆ ಶ್ರೀಮತಿ ಹರ್ಷಿತಾ, ಹಾಗೂ ಸದಸ್ಯರುಗಳಾದ ವಸಂತಗೌಡ ಪೂದೆ, ಶರತ್ ಕುಮಾರ್, ಶ್ರೀಮತಿ ವೀಣಾ, ಶ್ರೀಮತಿ ಲತಾ ಹಾಗೂ ಮುಖ್ಯ ಗುರುಗಳಾದ ಶ್ರೀಮತಿ ಶಶಿಕಾಲಾ ಹಾಗೂ ಗಣಿತ ಶಿಕ್ಷಕಿಯಾದ ಶ್ರೀಮತಿ ಮಿಥುನಾಕ್ಷಿ ಉಪಸ್ಥಿತರಿದ್ದರು.


ಕುಮಾರಿ ತೃಷಾ ಪ್ರಾರ್ಥಿಸಿ, ಕುಮಾರಿ ತುಷಾರ ಸ್ವಾಗತಿಸಿದರು. 7ನೇ ತರಗತಿಯ ವಿದ್ಯಾರ್ಥಿನಿ ನೇಹಾರವರು ರಚಿಸಿದ ಗಣಿತಕ್ಕೆ ಸಂಬಂಧಿಸಿದ ಮಾದರಿಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲಾ ಮುಖ್ಯ ಗುರುಗಳು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಗಣಿತ ಶಿಕ್ಷಕಿಯಾದ ಶ್ರೀಮತಿ ಮಿಥುನಾಕ್ಷಿ ಇವರು ನಿತ್ಯ ಜೀವನದಲ್ಲಿ ಗಣಿತ ಮಹತ್ವ ಮತ್ತು ಗಣಿತವನ್ನು ಕಲಿಯುವ ಸರಳ ಉಪಾಯಗಳು ಎನ್ನುವ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಂದ ಗಣಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳೇ ತಯಾರಿಸಿದ ಗಣಿತಕ್ಕೆ ಸಂಬಂಧಿಸಿದ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಅಡುಗೆ ಸಿಬ್ಬಂದಿಗಳು ಮತ್ತು ಊರಿನವರು ಪಾಲ್ಗೊಂಡಿದ್ದರು.


ನಂತರ ನಡೆದ ಮೆಟ್ರಿಕ ಮೇಳದಲ್ಲಿ ಮಕ್ಕಳಿಂದಲೇ ಮಾರುಕಟ್ಟೆಯ ನೈಜ ಚಿತ್ರಣವು ಮೂಡಿ ಬಂತು.