ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವರಿಗೆ ಮೀಫ್ ವತಿಯಿಂದ ಮಂಗಳೂರಿನಲ್ಲಿ ಸನ್ಮಾನ

0

ಸುಳ್ಯದಲ್ಲಿ ಸಾಂದೀಪನಿ ಬುದ್ದಿ ಮಾಂದ್ಯ ಮಕ್ಕಳ ವಿಶೇಷ ಶಾಲೆಯನ್ನು ಸ್ಥಾಪಿಸಿ ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ಲಯನ್ಸ್ ಮಾಜಿ ರಾಜ್ಯಪಾಲ,ತರಬೇತುದಾರ ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ. ಬಿ. ಸದಾಶಿವರವರನ್ನು ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ )ವತಿಯಿಂದ ಸನ್ಮಾನ ಕಾರ್ಯಕ್ರಮ ಡಿ. 26ರಂದು ಮಂಗಳೂರಿನ ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ನಡೆಯಿತು.
ಅಂತರ್ ಜಿಲ್ಲಾ”ಟ್ಯಾಲೆಂಟ್ ಹಂಟ್” ಸಮಾರಂಭದಲ್ಲಿ ಎಂ ಬಿ ಸದಾಶಿವರನ್ನು
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ಡಿ. ಸಿ. ಪಿ. ಸಿದ್ಧಾರ್ಥ ಗೋಯೇಲ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಸುಲ್ತಾನ್ ಗೋಲ್ಡ್ & ಜ್ಯುವೆಲ್ಸ್ ಎಂ. ಡಿ. ಅಬ್ದುಲ್ ರವೂಫ್, ಮೀಫ್ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ,ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ದ.ಕ.ಮತ್ತು ಉಡುಪಿ ಜಿಲ್ಲೆಗಳ ಅಂತರ್ ಪ್ರೌಢ ಶಾಲಾ ಕೌನ್ ಬನೇಗಾ ಮಾದರಿಯ ಕ್ವಿಝ್ ಸ್ಪರ್ಧೆಯನ್ನು ಎಂ. ಬಿ. ಸದಾಶಿವರು ನಡೆಸಿಕೊಟ್ಟರು.