ಕರಿಂಬಿಲ ಶಾಲಾ ವಾರ್ಷಿಕೋತ್ಸವ – ವಿವಿಧ ಕಾಮಗಾರಿಗಳ ಉದ್ಘಾಟನೆ

0

ಕರಿಂಬಿಲ ಶಾಲಾ ವಾರ್ಷಿಕೋತ್ಸವ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಡಿ. 23ರಂದು ನಡೆಯಿತು.


ಬೆಳಿಗ್ಗೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತ ಕುಕ್ಕಯಕೋಡಿ ಧ್ವಜಾರೋಹಣ ಮಾಡಿ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಯಪ್ರಕಾಶ್ ಲೆಕ್ಕೆಸಿರಿಮಜಲು, ವೆಂಕಪ್ಪ ರೈ ಪೊಯ್ಯೆತ್ತೂರು, ಶ್ರೀಮತಿ ಸುನೀತಾ ಅಲೆಂಗಾರ, ರಘುನಾಥ ಎಂಜೀರು, ನಾರಾಯಣ ಎಂಜೀರು, ರಾಮಚಂದ್ರ ಕರಂಬಿಲ ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾಕುಮಾರಿ, ಕೃಷಿಕ ದಯಾನಂದ ಕೋಟೆ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿ ಬಹುಮಾನ ವಿತರಿಸಿದರು. ಶ್ರೀಮತಿ ಸಾವಿತ್ರಿ ಎಂಜೀರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಭುವನ ಬಿ.ಆರ್ ಸ್ವಾಗತಿಸಿ ಭವ್ಯ ಬಿ ವಂದಿಸಿದರು. ಜಯಾ ಕೆ ಹಾಗೂ ಶ್ರೀಬಾಲಕೃಷ್ಣ ಕೆ ಹೇಮಳ ಕಾರ್ಯಕ್ರಮ ನಿರೂಪಿಸಿದರು.


ಸಂಜೆ ಶಾಲಾ ಪ್ರವೇಶದ್ವಾರವನ್ನು ರಾಜೇಶ್ ರೈ ಕಿನ್ಯಾಳ ಉದ್ಘಾಟಿಸಿದರು. ಪತಂಜಲಿ ಕುಟೀರವನ್ನು ಕೊಡುಗೆ ನೀಡಿರುವ ಅಬ್ದುಲ್ ಸತ್ತಾರ್ ರವರ ಪುತ್ರ ಹಸನ್ ಶಹಾನ್, ತರಗತಿ ಕೊಠಡಿಗಳಿಗೆ ಟೈಲ್ಸ್ ಅಳವಡಿಕೆಯನ್ನು ವಾಚಣ್ಣ ಗೌಡ ಕೇರ್ಪಡ ಪೂಜಾರಿಮನೆ, ಇಂಟರ್ ಲಾಕ್ ನ್ನು ಪದ್ಮನಾಭ ರೈ ಎಂಜೀರು ಹಾಗೂ ದಿ. ಲಕ್ಷ್ಮೀನಾರಾಯಣ ರೈ ಕಟ್ಟಬೀಡು ಮತ್ತು ದಿ. ಬಜ್ಪೆಗುತ್ತು ಉಮಾವತಿ ರೈ ನಿರ್ಮಿಸಿದ ಬಯಲು ರಂಗಮಂದಿರವನ್ನು ಶಾಸಕಿ ಕು. ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.

ಬಳಿಕ ಎಡಮಂಗಲ ಗ್ರಾ.ಪಂ. ರಾಮಣ್ಣ ಜಾಲ್ತಾರ್ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಎಡಮಂಗಲ ಗ್ರಾ.ಪಂ. ಸದಸ್ಯೆ ಶ್ರೀಮತಿ ರೇವತಿ ಎಂಜೀರು ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ ಕೆ, ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸರೋಜಿನಿ, ಎಡಮಂಗಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ಪದ್ಮನಾಭ ರೈ , ರಮೇಶ ಕೋಟೆ, ಎಡಮಂಗಲ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಧೀರಕುಮಾರ ಶೆಟ್ಟಿ ಕುಕ್ಕಯಕೋಡಿ, ಕಜೆ ಕರಿಂಬಿಲ ತರ್ಬಿಯತುಲ್ ಇಸ್ಲಾಂ ಮದ್ರಸದ ಅಬ್ದುಲ್ ಕುಂಞ ಉಳ್ಳಾಲಾಡಿ, ಬಾಲಕೃಷ್ಣ ಕೆ ಹೇಮಳ, ಸೀತಾರಾಮ ಗೌಡ ನಾಗನಕಜೆ, ನಿವೃತ್ತ ಮುಖ್ಯ ಶಿಕ್ಷಕ ಪೂವಪ್ಪ ಗೌಡ ಕೋಲ್ಪೆ ಉಪಸ್ಥಿತರಿದ್ದು, ಶುಭಾ ಹಾರೈಸಿದರು.

ದಾನಿಗಳನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರನ್ನು, ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಶ್ರೀಮತಿ ಭುವನ ಬಿ.ಆರ್ ವರದಿ ವಾಚಿಸಿದರು. ವಸಂತ ಕುಕ್ಕಯಕೋಡಿ ಸ್ವಾಗತಿಸಿ ಸಹ ಶಿಕ್ಷಕಿ ಭವ್ಯ ಬಿ ವಂದಿಸಿದರು. ಶಿಕ್ಷಕಿ ಜಯಾ ಕೆ ಹಾಗೂ ಪ್ರದೀಪ ಕುಮಾರ್ ಗುತ್ತು ಕಾರ್ಯಕ್ರಮ ನಿರೂಪಿಸಿದರು. ನಂತರ ನರ್ಲಡ್ಕ ಹಾಗೂ ಮರ್ಧೂರಡ್ಕ ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳು, ಕರಿಂಬಿಲ ಶಾಲಾ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ವೈಭವ ನೆರೆವೇರಿತು. ಬಳಿಕ ತುಳು ನಾಟಕ ಕೊಪ್ಪರಿಗೆ ಪ್ರದರ್ಶನಗೊಂಡಿತು.