ಸಿ.ಸಿ.ಎಫ್. ಕಚೇರಿ ಅಧೀಕ್ಷಕ ಪುರುಷೋತ್ತಮ್ ನಾಯ್ಕ್ ನಿವೃತ್ತಿ

0

ಮಂಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಅಧೀಕ್ಷಕರಾಗಿದ್ದ ಸುಳ್ಯದ ಪುರುಷೋತ್ತಮ ನಾಯ್ಕ್ ಬಸ್ಮಡ್ಕ ಕುರುಂಜಿ ಇವರು ಸೇವೆಯಿಂದ ನಿವೃತ್ತರಾಗಿದ್ದಾರೆ.

ಇವರು 26.9.1983 ರಂದು ಮಡಿಕೇರಿಯಲ್ಲಿ ಸೇವೆಗೆ ಸೇರಿದ ಇವರು ಮೂಡಬಿದ್ರೆ, ಸುಳ್ಯ, ಮಂಗಳೂರು, ಬೆಳ್ತಂಗಡಿ ಮೊದಲಾದೆಡೆ ಸೇವೆ ಸಲ್ಲಿಸಿದ್ದರು.
ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದವರಾದ ಇವರು ಸುಳ್ಯದ ಮಹಾಲಿಂಗ ನಾಯ್ಕರ ಅಳಿಯನಾದ ಬಳಿಕ ಇವರು ಸುಳ್ಯದಲ್ಲೆ ನೆಲೆಸಿದ್ದಾರೆ. ಪತ್ನಿ ರಾಧಾ ಬಿ. ಗೃಹಿಣಿಯಾಗಿದ್ದು ಪುತ್ರ ಜ್ಞಾನೇಶ್ ಇಂಜಿನಿಯರ್ ಆಗಿದ್ದಾರೆ. ಪುತ್ರಿ ಅನುಷಾ ಇಂಜಿನಿಯರಿಂಗ್ ಪೂರೈಸಿ ಬೆಂಗಳೂರಲ್ಲಿ ಉನ್ನತ ವ್ಯಾಸಂಗದಲ್ಲಿದ್ದಾರೆ.